ತ್ರಿಶೂರ್: ಅದೃಷ್ಟವು ಅನೇಕ ವಿಧಗಳಲ್ಲಿ ನಮಗೆ ಬರುತ್ತದೆ. ಕೆಲವೊಮ್ಮೆ ಇದು ಒಂದು ಜೀವವನ್ನು ಉಳಿಸಬಹುದು. ಹಾವಿನ ಕಡಿತದಿಂದ ಕೂದಳೆಳೆಯ ಅಂತರದಿಂದ ಪಾರಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ತ್ರಿಶೂರ್ ನಿವಾಸಿ ಸೋಜನ್ ಎಂಬವರು ಅದೃಷ್ಟವಶಾತ್ ನಾಗರಹಾವಿನ ಕಡಿತದಿಂದ ಪಾರಾಗಿದ್ದಾರೆ.
ಪ್ರಯಾಣಕ್ಕೆ ತೆರಳಲು ಹೆಲ್ಮೆಟ್ ತೆಗೆದು ತಲೆಗೆ ಹಾಕಿಕೊಂಡಾಗ ಅದರ ಒಂದು ಸಣ್ಣ ಭಾಗ ಸೋಜನ್ ಅವರ ಗಮನ ಸೆಳೆಯುತ್ತದೆ. ಅವರು ಹೆಲ್ಮೆಟ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಹಾವು ಕಂಡುಬಂದಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕಾಗಮಿಸಿ ಹೆಲ್ಮೆಟ್ ಒಳಗಿದ್ದ ಹಾವನ್ನು ಹೊರತೆಗೆದಿದ್ದಾರೆ. ಅದರಲ್ಲಿ 2 ತಿಂಗಳ ಮರಿ ನಾಗರ ಹಾವು ಇತ್ತು. ಅದು 8 ಅಡಿ ಉದ್ದದ ನಾಗರಹಾವು ಅಲ್ಲದಿದ್ದರೂ, ಅದರ ಕಡಿತವು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ದೊಡ್ಡ ಹಾವುಗಳ ಕಡಿತಕ್ಕಿಂತ ಚಿಕ್ಕ ನಾಗರಹಾವುಗಳ ಕಾಟ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.