ನವದೆಹಲಿ :ಕೇಂದ್ರ ಸರ್ಕಾರ ಶುಕ್ರವಾರ ಮದ್ರಾಸ್ ಮತ್ತು ಮಣಿಪುರ ಹೈಕೋರ್ಟ್ ಗಳಿಗೆ ಮೂವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದು, ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯರೊಬ್ಬರು ಮಣಿಪುರ ಹೈಕೋರ್ಟ್ ಗೆ ಮೊದಲ ಬಾರಿಗೆ ನೇಮಕಗೊಂಡಿದ್ದಾರೆ.
ನವದೆಹಲಿ :ಕೇಂದ್ರ ಸರ್ಕಾರ ಶುಕ್ರವಾರ ಮದ್ರಾಸ್ ಮತ್ತು ಮಣಿಪುರ ಹೈಕೋರ್ಟ್ ಗಳಿಗೆ ಮೂವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿದ್ದು, ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯರೊಬ್ಬರು ಮಣಿಪುರ ಹೈಕೋರ್ಟ್ ಗೆ ಮೊದಲ ಬಾರಿಗೆ ನೇಮಕಗೊಂಡಿದ್ದಾರೆ.
ಕೇಂದ್ರ ಸರ್ಕಾರ ಅಂತಿಮಪಡಿಸಿರುವ ಇತರ ಇಬ್ಬರಲ್ಲಿ ಒಬ್ಬರು ಪರಿಶಿಷ್ಟ ಜಾತಿ ಹಾಗೂ ಮತ್ತೊಬ್ಬರು ಇತರ ಹಿಂದುಳಿದ ವರ್ಗಕ್ಕೆ ಸೇರಿದವರು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಈ ಮೂವರು ನ್ಯಾಯಮೂರ್ತಿಗಳ ನೇಮಕವನ್ನು ಎಕ್ಸ್ ನಲ್ಲಿ ಪ್ರಕಟಿಸಿದ್ದಾರೆ. ಈ ಸಂಬಂಧ ಅಧಿಸೂಚನೆ ಇಷ್ಟರಲ್ಲೇ ಹೊರಬೀಳಲಿದೆ.
ಗೊಲ್ಮೀ ಗೈಫುಲ್ ಶಿಲ್ಲು ಕಬೈ ಅವರ ನೇಮಕಾತಿ ಪ್ರಸ್ತಾವ ಕಳೆದ ಜನವರಿ 10ರಿಂದ ಬಾಕಿ ಇತ್ತು. ಇತರ ಇಬ್ಬರು ವಕೀಲರಾದ ಎನ್.ಸೆಂಥಿಲ್ ಕುಮಾರ್ ಮತ್ತು ಜಿ.ಅರುಲ್ ಮುರುಗನ್ ಅವರು ಮದ್ರಾಸ್ ಹೈಕೋರ್ಟ್ ಗೆ ನೇಮಕಗೊಂಡಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನಾ ಅವರನ್ನೊಳಗೊಂಡ ಕೊಲಾಜಿಯಂ ಈ ಹೆಸರುಗಳನ್ನು ಶಿಫಾರಸ್ಸು ಮಾಡಿತ್ತು.