ಬದಿಯಡ್ಕ: ತುಲು ಲಿಪಿ ಬ್ರಹ್ಮ ಎಂದು ಖ್ಯಾತಿ ಪಡೆದಿರುವ ತಾಳೆಯೋಲೆ, ಶಿಲಾಶಾಸನದಲ್ಲಿ ಮಾತ್ರ ಕಾಣುತಿದ್ದ ತುಲು ಲಿಪಿಯನ್ನು ಸಂಶೋಧನೆ ಮಾಡಿ ಜನ ಸಾಮಾನ್ಯರಿಗೂ ಸುಲಭವಾಗಿ ಕಲಿಯಬಹುದಾದ ತುಲು ಲಿಪಿಯನ್ನು ಲೋಕಕ್ಕೆ ಸಮರ್ಪಿಸಿದ ವಿದ್ವಾಂಸ ಡಾ. ಪುಂಡೂರು ವೆಂಕಟರಾಜ ಪುಣಿಂಚತ್ತಾಯ(ಪು.ವೆಂ.ಪು) ಅವರ ಜನ್ಮದಿನಾಚರಣೆ ವಿಶ್ವ ತುಳು ಲಿಪಿ ದಿನದಂದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಜೈ ತುಲುನಾಡ್ ಕಾಸರಗೋಡು ವಲಯ ಹಾಗೂ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಶಾಲಾ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು..
ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸಮಾರಂಭ ಉದ್ಘಾಟಿಸಿ ಪು.ವೆಂ.ಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ನಡೆದಾಡುವ ವಿಶ್ವ ಕೋಶದಂತಿದ್ದ ಡಾ. ವೆಂಕಟ್ರಾಜ ಪುಣಿಂಚಿತ್ತಾಯ ಅವರ ತುಳು ಲಿಪಿ ಸಂಶೋಧನೆ ತುಳು ಭಾಷೆಗೆ ಸಲ್ಲಿಸಿದ ಮಹತ್ವದ ಕೊಡುಗೆಯಾಗಿದೆ. ತುಳು ಭಾಷೆ ಕಲಿಕೆ ಸಾರ್ವತ್ರಿಕವಾದಾಗ ಭಾಷೆ ಮತ್ತಷ್ಟು ಬೆಳೆಯಲು ಸಾಧ್ಯ ಎಂದು ತಿಳಿಸಿದರು. ಜೈ ತುಲುನಾಡ್ (ರಿ.) ಕಾಸರಗೋಡು ವಲಯ ಅಧ್ಯಕ್ಷೆ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕ ಶಿವಪ್ರಕಾಶ್ ಎಂ.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪುವೆಂಪು ನಡೆದುಬಂದ ದಾರಿ ಮತ್ತು ಸಾಧನೆ ಬಗ್ಗೆ ಶಾಲಾ ಶಿಕ್ಷಕಿ ಡಾ.ವಿದ್ಯಾಲಕ್ಷ್ಮೀ ಮಾಹಿತಿ ನಿಡಿದರು. ಜೈ ತುಲುನಾಡ್ (ರಿ.) ಕಾರ್ಯದರ್ಶಿ ಕಿರಣ್ ತುಲುವೆ, ಪುವೆಂಪು ಅವರ ಪುತ್ರ ವಿಜಯರಾಜ ಪುಣಿಂಚತ್ತಾಯ, ಜೈ ತುಲುನಾಡ್ (ರಿ.) ಸಂಘಟನೆ ಉಪಾಧ್ಯಕ್ಷರುಗಳಾದ ಉಮೇಶ್ ಸಾಲಿಯಾನ್ ಸಿರಿಯಾ, ಉದಯ್ ಪೂಂಜಾ, ಪೆÇ್ರ ಎ ಶ್ರೀನಾಥ್, ಸಂಘಟನೆ ಪದಾಧಿಕಾರಿಗಳಾದ ಜಗನ್ನಾಥ ಬದಿಯಡ್ಕ, ಹರಿಕಾಂತ ಸಾಲಿಯಾನ್ ಕಾಸರಗೋಡು, ವಿನೋದ ಪ್ರಸಾದ್ ರೈ, ಪವಿತ್ರ ಮಾಡ, ನಿರ್ಮಲ ಖಂಡಿಗೆ ಉಪಸ್ಥಿತರಿದ್ದರು. ಅನ್ವಿತ ಮತ್ತು ಶೈಲಜಾ ಟೀಚರ್ ಪುವೆಂಪು ರಚಿಸಿದ ಗೀತೆಯನ್ನು ಹಾಡಿದರು.
ಜೈ ತುಲುನಾಡ್ ಸಂಘಟನೆ ಉಪಾಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು ಸ್ವಾಗತಿಸಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ ಶೈಲಜಾ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ಉತ್ತಮ್ ಯು ವಂದಿಸಿದರು. ಈ ಸಂದರ್ಭ ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ತುಳು ಲಿಪಿ ಕಲಿಕಾ ಕಾರ್ಯಾಗಾರ ನಡೆಸುವ ಬಗ್ಗೆ ಅನುಮತಿ ಕೋರಿ ಸಂಘಟನೆ ಪದಾಧಿಕಾರಿಗಳು ಶಾಲಾ ವ್ಯವಸ್ಥಾಪಕರಿಗೆ ಮತ್ತು ಮುಖ್ಯೋಪಾಧ್ಯಾಯರಿಗೆ ಮನವಿ ಸಲ್ಲಿಸಿದರು.