ಕೊಚ್ಚಿ: ಪಾಪ್ಯುಲರ್ ಫ್ರಂಟ್ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ. ಬಂಧಿಸಿರುವ ಮುಖ್ಯ ಶಸ್ತ್ರಾಸ್ತ್ರ ತರಬೇತುದಾರ ಮುಹಮ್ಮದ್ ಮುಬಾರಕ್ ನ ಜಾಮೀನು ಅರ್ಜಿಯನ್ನು ಕೊಚ್ಚಿ ಎನ್.ಐ.ಎ. ವಿಶೇಷ ನ್ಯಾಯಾಲಯವು ವಿವರವಾದ ವಾದಗಳ ನಂತರ ತಿರಸ್ಕರಿಸಿದೆ.
ವಕೀಲರೂ ಆಗಿರುವ ಮುಬಾರಕ್ ಅವರ ಮನೆಯ ಮೇಲೆ ಎನ್‍ಐಎ ತಂಡ ದಾಳಿ ನಡೆಸಿದ್ದು, ಮಾರಕಾಸ್ತ್ರಗಳಾದ ಕತ್ತಿಗಳು, ಕೊಡಲಿಗಳು ಮತ್ತು ಹಲವು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅದೇ ದಿನ ಕಸ್ಟಡಿಗೆ ಪಡೆದಿದ್ದ ಮುಬಾರಕ್‍ನ ವಿಚಾರಣೆಯಿಂದ ಎನ್‍ಐಎಗೆ ಹಲವು ಮಹತ್ವದ ಮಾಹಿತಿ ಸಿಕ್ಕಿದೆ. ಮುಹಮ್ಮದ್ ಮುಬಾರಕ್ ಪಿಎಫ್‍ಐನ ಮುಖ್ಯ ಶಸ್ತ್ರಾಸ್ತ್ರ ತರಬೇತುದಾರ ಮತ್ತು ಪಾಲಕ್ಕಾಡ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಪೆರಿಯಾರ್ ವ್ಯಾಲಿ ಮತ್ತು ಗ್ರೀನ್ ವ್ಯಾಲಿಯಂತಹ ಪಿ.ಎಫ್.ಐ. ಕೇಂದ್ರಗಳಲ್ಲಿ ಮುಬಾರಕ್ ಶಸ್ತ್ರಾಸ್ತ್ರ ತರಬೇತಿ ನೀಡಿದ್ದ ಎಂಬ ಎನ್‍ಐಎ ವಾದವನ್ನು ಪರಿಗಣಿಸಿ ಕೊಚ್ಚಿ ಎನ್‍ಐಎ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಎನ್.ಐ.ಎ. ವಿಶೇಷ ಪ್ರಾಸಿಕ್ಯೂಟರ್ ಅಡ್ವ. ಶಾಸ್ತಮಂಗಲಂ ಅಜಿತ್‍ಕುಮಾರ್, ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀನಾಥ್ ಎಸ್. ಉಪಸ್ಥಿತರಿದ್ದರು.
ಮತ್ತೊಬ್ಬ ಆರೋಪಿ ಬಂಧನ:
ಕೊಚ್ಚಿ: ಪಿಎಫ್‍ಐ ಭಯೋತ್ಪಾದನೆ ಪ್ರಕರಣದಲ್ಲಿ ಮಲಪ್ಪುರಂ ಆರ್ಯಂಕರ ಪೂಕೋತ್ತೂರ್ ಮೂಲದ ಶಿಹಾಬ್ (25) ಎಂಬಾತನನ್ನು ಎನ್.ಐ.ಎ. ಪೋಲೀಸರು ಬಂಧಿಸಿದ್ದಾರೆ. ಈತ ಪ್ರಕರಣದ 68ನೇ ಆರೋಪಿ. ಪಾಲಕ್ಕಾಡ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಸಂಚಿನಲ್ಲಿ ಶಿಹಾಬ್ ಕೂಡ ಭಾಗಿಯಾಗಿದ್ದಾನೆ. ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಹಕೀಮ್ ತಲೆಮರೆಸಿಕೊಳ್ಳಲು ಶಿಹಾಬ್ ಕೂಡ ಸಹಾಯ ಮಾಡಿದ್ದ. ಆರೋಪಿಯನ್ನು ಪಾಲಕ್ಕಾಡ್ ನಿಂದ ಬಂಧಿಸಲಾಗಿದೆ. ಕೊಚ್ಚಿ ಎನ್.ಐ.ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ನೀಡಿದೆ. 25ರಂದು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು.