ಕಾಸರಗೋಡು: ದಸರಾ ಸಾಂಸ್ಕೃತಿಕೋತ್ಸವ-2023 ಕಾರ್ಯಕ್ರಮ ಕಾಸರಗೋಡು ಪಾಂಗೋಡು ಶ್ರೀ ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ, 15ರಿಂದ 24ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳೂರಿನ ಪತ್ತ್‍ಮುಡಿ ಸಭಾಂಗಣದಲ್ಲಿ ಕಲ್ಕೂರ ಪ್ರತಿಸ್ಥಾನ ಮಂಗಳೂರು ಆಯೋಜಿಸಿದ ಕಾರ್ಯಕ್ರಮದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ನೆರವೇರಿಸಿ ಆಶೀರ್ವಚನ ನೀಡಿದರು. ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ಅಧ್ಯಕ್ಷ ವಾಮನ್‍ರಾವ್ ಬೇಕಲ್ ಅವರಿಗೆ ಆಮಂತ್ರಣಪತ್ರಿಕೆ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು.
ಅಚ್ಚುತ ಚೆವಾರ್, ಥಾಮಸ್ ಡಿ ಸೋಜಾ, ರವಿ ನಾಯ್ಕಾಪು, ಎ.ಆರ್ ಸುಬ್ಬಯ್ಯಕಟ್ಟೆ, ಪೆÇ್ರ, ಎ ಶ್ರೀನಾಥ್, ಸಂದ್ಯಾ ರಾಣಿ ಟೀಚರ್, ಶ್ರೀಹರಿ ಭಟ್ ಪೆಲ್ತಾಜೆ ಉಪಸ್ಥಿತರಿದ್ದರು.