ಕರಿ ಜೀರಿಗೆ ಇದು ಬಹುತೇಕ ಜನರಿಗೆ ಗೊತ್ತಿರುತ್ತದೆ, ಆಯುರ್ವೇದ ಅಂಗಡಿಗಳಲ್ಲಿ ಸಿಗುತ್ತದೆ, ಹಳ್ಳಿಗಳಲ್ಲಿ ಇದರ ಗಿಡ ಬೆಳೆಸಿ, ಕರಿ ಜೀರಿಗೆಯನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಇದನ್ನು ಅನೇಕ ಕಾಯಿಲೆಗಳಿಗೆ ಮನೆಮದ್ದಾಗಿ ಬಳಸುತ್ತಾರೆ. ಇದನ್ನು ಬಾಣಂತಿ ಆರೈಕೆಯಲ್ಲಿ ಹೆಚ್ಚಾಗಿ ಬಳಸಲಾಗುವುದು, ಇದರಲ್ಲಿ ನಂಜು ತೆಗೆಯುವ ಗುಣವಿದೆ. ಇದರಿಂದಾಗಿ ಗಾಯ ಒಣಗಲು ತುಂಬಾನೇ ಒಳ್ಳೆಯದು ಎಂದು ಇದನ್ನು ಬಳಸುತ್ತಾರೆ. ಆದರೆ ಇದನ್ನು ದಿನನಿತ್ಯ ಬಳಸಿದರೆ ದೊರೆಯುವ ಪ್ರಯೋಜನಗಳ ಬಗ್ಗೆ ಗೊತ್ತೇ? ಮಧುಮೇಹಿಗಳಿಗಂತೂ ಇದು ತುಂಬಾನೇ ಪ್ರಯೋಜನಕಾರಿ ಹೇಗೆ ಎಂದು ನೋಡೋಣ:
ಕರಿ ಜೀರಿಗೆ ನೀರು ಕುಡಿಯಿರಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿ ಜೀರಿಗೆಯ ನೀರನ್ನು ಕುಡಿಯಿರಿ. ಒಂದು ಲೋಟ ನೀರಿಗೆ ಅರ್ಧ ಚಮಚ ಕರಿ ಜೀರಿಗೆ ಹಾಕಿ ಕುದಿಸಿ ಆ ನೀರನ್ನ ಕುಡಿಯಿರಿ. ಈ ಕರಿಜೀರಿಗೆ ನೀರನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ. ಕೆಲವರು ಶುಗರ್ ನಿಯಂತ್ರಣದಲ್ಲಿರುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುವುದು
ಕೊಲೆಸ್ಟ್ರಾಲ್ ನಿಯಂತ್ರಿಸಲು ಕೂಡ ಇದು ತುಂಬಾನೇ ಸಹಕಾರಿ. ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದರೆ ಕರಿಜೀರಿಗೆಯ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.
ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ
ಕರಿಜೀರಿಗೆಗೆ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯಿದೆ, ಕ್ಯಾನ್ಸರ್ ಕಣಗಳು ಉಂಟಾಗುವುದನ್ನು ಇದು ತಡೆಗಟ್ಟುತ್ತದೆ. ಒಂದು ಅಧ್ಯಯನವು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಕರಿ ಜೀರಿಗೆ ಸಹಕಾರಿ ಎಂದು ಹೇಳಿದೆ.
ಕರಿಜೀರಿಗೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ
ಕರಿಜೀರಿಗೆಯಲ್ಲಿ ಆಕ್ಸಿಡೆಂಟ್ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಗಾಯವಿದ್ದರೆ ಅದು ಒಣಗಲು ಸಹಕಾರಿ. ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ.
ಹೊಟ್ಟೆ ಬೊಜ್ಜು ಕರಗಿಸಲು ಸಹಕಾರಿ
ಇನ್ನು ನೀವು ಪ್ರತಿದಿನ ಬೆಳಗ್ಗೆ ಕರಿಜೀರಿಗೆ ನೀರನ್ನು ಕುಡಿಯುವುದರಿಂದ ಹೊಟ್ಟೆ ಬೊಜ್ಜು ಕರಗುವುದು.
ಅಲ್ಸರ್ ತಡೆಗಟ್ಟುತ್ತದೆ
ಅಲ್ಸರ್ ಉಂಟಾದರೆ ತುಂಬಾನೇ ಹೊಟ್ಟೆನೋವು ಉಂಟಾಗುವುದು. ಈ ಹೊಟ್ಟೆ ಅಲ್ಸರ್ ಉಂಟಾಗದಂತೆ ತಡೆಯುವ ಸಾಮರ್ಥ್ಯ ಕರಿಜೀರಿಗೆ ಇದೆ ಎಂದು ಅಧ್ಯಯನವರದಿ ಹೇಳಿದೆ ಎಂದು ಹೆಲ್ತ್ ಲೈನ್ ವರದಿ ಮಾಡಿದೆ.
ಹೊಟ್ಟೆ ಬೊಜ್ಜು ಕರಗಿಸಲು ಸಹಕಾರಿ
ಹೊಟ್ಟೆ ಬೊಜ್ಜು ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಈ ಹೊಟ್ಟೆ ಬೊಜ್ಜು ಕರಗಿಸಲು ಕರಿ ಜೀರಿಗೆ ಪರಿಣಾಮಕಾರಿ. ಕರಿಜೀರಿಗೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡು ನಂತರ ಸ್ವಲ್ಪ ವರ್ಕೌಟ್ ಮಾಡಿದರೆ ನೀವು ಬಯಸಿದಂತೆ ಹೊಟ್ಟೆ ಬೊಜ್ಜು ಕರಗುವುದು.
ಇದನ್ನು ಹೇಗೆ ಬೆಳೆಯಬಹುದು?
ಇದರ ಬೀಜ ಸಿಕ್ಕಿದರೆ ಮಣ್ಣಿನಲ್ಲಿ ಹಾಕಿ.. ಒಂದು 3-4 ಗಿಡ ಸಾಕು ನಿಮಗೆ ಒಂದು ವರ್ಷಕ್ಕೆ ಆಗುವಷ್ಟು ಕರಿಜೀರಿಗೆ ಆಗುತ್ತದೆ.
ಏನಾದರೂ ಅಡ್ಡಪರಿಣಾಮವಿದೆಯೇ?
ಸಾಮಾನ್ಯವಾಗಿ ಕರಿಜೀರಿಗೆಯನ್ನು ಎಲ್ಲರೂ ಬಳಸಬಹುದು, ಯಾವುದೇ ಅಡ್ಡಪರಿಣಾಮವಿಲ್ಲ, ಆದರೆ ನೀವು ಗಾಯಕ್ಕೆ ಬಳಸುವುದಾದರೆ ಪ್ಯಾಚ್ ಟೆಸ್ಟ್ ಮಾಡಿ ನಂತರ ಬಳಸಿ.