ನವದೆಹಲಿ: ಸಂಸದರಿಗೆ ನೀಡಿರುವ ವಿಶೇಷ ರಕ್ಷಣೆಯು ಅವರನ್ನು ಕಾನೂನಿಗೆ ಅತೀತರನ್ನಾಗಿಸುವ ಉದ್ದೇಶ ಹೊಂದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ತನ್ನ ನಿಲುವು ತಿಳಿಸಿದೆ.
ನವದೆಹಲಿ: ಸಂಸದರಿಗೆ ನೀಡಿರುವ ವಿಶೇಷ ರಕ್ಷಣೆಯು ಅವರನ್ನು ಕಾನೂನಿಗೆ ಅತೀತರನ್ನಾಗಿಸುವ ಉದ್ದೇಶ ಹೊಂದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ತನ್ನ ನಿಲುವು ತಿಳಿಸಿದೆ.
ಶಾಸನ ಸಭೆಗಳಲ್ಲಿ ಮತ ಚಲಾಯಿಸಲು ಅಥವಾ ಅಲ್ಲಿ ಮಾತನಾಡಲು ಸಂಸದರು, ಶಾಸಕರು ಲಂಚ ಪಡೆದಿದ್ದರೆ ಅವರಿಗೆ ಕಾನೂನು ಕ್ರಮದಿಂದ ರಕ್ಷಣೆ ಇದೆ ಎಂದು 1998ರ ತೀರ್ಪನ್ನು ಮರುಪರಿಶೀಲಿಸಬೇಕೇ ಎಂಬುದರ ಕುರಿತ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.
ಕೇಂದ್ರದ ನಿಲುವನ್ನು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೋರ್ಟ್‌ಗೆ ತಿಳಿಸಿದರು. 'ಲಂಚ ಕೊಟ್ಟಾಗ, ಅದನ್ನು ಶಾಸನ ಸಭೆಯ ಸದಸ್ಯ ಪಡೆದುಕೊಂಡಾಗ ಅಪರಾಧ ಕೃತ್ಯ ನಡೆದಿರುತ್ತದೆ. ಇದನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ನಿಭಾಯಿಸಬಹುದು' ಎಂದು ಮೆಹ್ತಾ ವಾದಿಸಿದರು.
'ದೇಶದ ಕಾನೂನು ಸ್ಪಷ್ಟವಾಗಿ ಅಪರಾಧ ಎಂದು ಹೇಳಿರುವ ಕೃತ್ಯಕ್ಕೆ ಸಂವಿಧಾನದ ವಿಧಿಗಳ (105 ಮತ್ತು 194) ಅಡಿಯಲ್ಲಿ ರಕ್ಷಣೆ ನೀಡಲು ಆಗದು. ಯಾವುದೇ ಜವಾಬ್ದಾರಿಯುತ ಸರ್ಕಾರ ಅಥವಾ ಸಾರ್ವಜನಿಕ ಪ್ರಾಧಿಕಾರವು ಅಂತಹ ನಿಲುವು ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ವೆಂಕಟರಮಣಿ ಅವರು ಹೇಳಿದರು.
'ಸಾಂವಿಧಾನಿಕ ವಿಶೇಷ ಅಧಿಕಾರಿಗಳು ವೈಯಕ್ತಿಕ ರಕ್ಷಣಾ ಕ್ರಮಗಳಲ್ಲ. ಬದಲಿಗೆ ಅವು ನಿರ್ದಿಷ್ಟ ವೃತ್ತಿಯಲ್ಲಿ ತೊಡಗಿದವರಿಗೆ ಇರುವ ರಕ್ಷಣೆಗಳು. ಪ್ರತಿನಿಧಿಯು ತನ್ನ ಕರ್ತವ್ಯವನ್ನು ತಪ್ಪಿಲ್ಲದೆ ಮಾಡಲು ಸಾಧ್ಯವಾಗಲಿ ಎಂಬ ಕಾರಣಕ್ಕೆ ಇಂತಹ ರಕ್ಷಣೆಯನ್ನು ನೀಡಲಾಗಿದೆ. ಈ ರಕ್ಷಣೆಯು ಸಂಸದರನ್ನು ಕಾನೂನಿಗೆ ಮಿಗಿಲಾದ ವ್ಯಕ್ತಿಯನ್ನಾಗಿಸುವ ಉದ್ದೇಶ ಹೊಂದಿಲ್ಲ. ಆದರೆ ಅವರ ವಿರುದ್ಧ ರಾಜಕೀಯ ಪ್ರೇರಿತವಾದ ಆಧಾರರಹಿತ ಆರೋಪಗಳು ಬಾರದೆ ಇರಲಿ ಎಂಬ ಉದ್ದೇಶ ಹೊಂದಿವೆ' ಎಂದು ಮೆಹ್ತಾ ವಿವರಿಸಿದರು.