ಕಾಸರಗೋಡು: ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ತಾಲೂಕು ಸಮಿತಿಯ ನೂತನ ಕಛೇರಿಯನ್ನು ಕಾಸರಗೋಡು ನಗರಸಭಾ ಬಸ್ ನಿಲ್ದಾಣ ಸಂಕೀರ್ಣದಲ್ಲಿ ಆರಂಭಿಸಲಾಯಿತು. ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ವಿ. ಎಂ. ಮುನೀರ್ ನೂತನ ಕಚೇರಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ನಗರಸಭಾ ಬಸ ನಿಲ್ದಾಣವನ್ನು ನವೀಕರಿಸುವುದರ ಜತೆಗೆ ಬಸ್ ನಿಲ್ದಾಣಕ್ಕೆ ದ್ವಾರವನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಸಂಘಟನೆ ಅಧ್ಯಕ್ಷ ಎಂ. ಎ. ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಜಿಲ್ಲಾಧ್ಯಕ್ಷ ಕೆ. ಗಿರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣನ್ ನಂಬಿಯಾರ್ ಅವರು ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್ ಅವರನ್ನು ಗೌರವಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಲಕ್ಷ್ಮಣನ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಜಿಲ್ಲಾ ಕೋಶಾಧಿಕಾರಿ ಪಿ. ಎ. ಮಹಮ್ಮದ್‍ಕುಞÂ, ಹೊಸದುರ್ಗ ತಾಲೂಕು ಘಟಕ ಅಧ್ಯಕ್ಷ ಸಿ.ರವಿ, ಧನರಾಜ್ ಮಂಜೇಶ್ವರಂ, ಸಿ. ಐ ಟಿ. ಯು. ಜಿಲ್ಲಾ ಕಾರ್ಯದರ್ಶಿ ಗಿರಿಕೃಷ್ಣನ್, ಕೆ.ಸಿ. ಇರ್ಷಾದ್, ಪಿ.ಎಸ್. ನಾಸರ್ ಮತ್ತು ತಂಬನ್ ನಾಯರ್ ಉಪಸ್ಥಿತರಿದ್ದರು. ಸಂಘಟನೆ ಕಾರ್ಯದರ್ಶಿ ಸಿ.ಎ. ಮುಹಮ್ಮದ್‍ಕುಞÂ ಸ್ವಾಗತಿಸಿದರು. ಕೋಶಾಧಿಕಾರಿ ರಾಧಾಕೃಷ್ಣನ್ ವಂದಿಸಿದರು.