ಸಮರಸ ಚಿತ್ರಸುದ್ದಿ: ಉಪ್ಪಳ: ಮುಳಿಂಜ ಜಿ. ಎಲ್. ಪಿ. ಶಾಲೆಯಲ್ಲಿ ನಡೆದ ಗಾಂಧಿಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ ಹಾಗೂ ಶುಚಿತ್ವ ಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಪಾನ ಇಕ್ಬಾಲ್ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಹಮಾನ್ ಟಿ. ಯಂ. ಪಾಲ್ಗೊಂಡರು. ಶಾಲಾ ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ದಿನದ ಮಹತ್ವವನ್ನು ತಿಳಿಸಿದರು. ಬಳಿಕ ಶಾಲಾ ಪರಿಸರವನ್ನು ಶುಚಿಗೊಳಿಸಲಾಯಿತು.