ಬದಿಯಡ್ಕ: ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಂಭ್ರಮದ ಗಾಂಧಿ ಜಯಂತಿ ಆಚರಣೆ ನಡೆಯಿತು. ಪ್ರಾಂಶುಪಾಲ ಮಾಧವನ್ ಭಟ್ಟತ್ತಿರಿ ಧ್ವಜಾರೋಹಣಗೈದು ಚಾಲನೆ ನೀಡಿದರು.
ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಾಫಿ ಚೂರಿಪಳ್ಳ ಮುಖ್ಯ ಅತಿಥಿಯಾಗಿ ಮಾತನಾಡಿ, ಗಾಂಧೀಜಿಯ ಆದರ್ಶ ಇಡೀ ವಿಶ್ವಕ್ಕೆ ಮಾದರಿ ಅವರ ಆದರ್ಶ ತತ್ವಗಳನ್ನು ನಾವು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಲಾ ನೌಕರ ಸಂಘದ ಕಾರ್ಯದರ್ಶಿ ಪ್ರಭಾಕರ ನಾಯರ್, ಶಿಕ್ಷಕಿ ಪ್ರಭಾವತಿ ಕೆದಿಲಾಯ ಶುಭಹಾರೈಸಿದರು. ಗಾಂಧಿ ಪ್ರತಿಮೆಗೆ ಮತ್ತು ಶಾಲಾ ಸ್ಥಾಪಕ ಪಿ.ಎಸ್. ಶಾಸ್ತ್ರಿ ಅವರ ಪ್ರತಿಮೆಗೆ ಹಾರರ್ಪಣೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ, ಗಾಂಧಿ ಸ್ಮøತಿಗೀತೆ ನಡೆಯಿತು. ಮುಖ್ಯೋಪಾಧ್ಯಾಯನಿ ಮಿನಿ.ಪಿ. ಸ್ವಾಗತಿಸಿ, ನಿರಂಜನ ರೈ ಪೆರಡಾಲ ವಂದಿಸಿದರು. ದಿವ್ಯ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು. ಅಧ್ಯಾಪಕ ವೃಂದ, ಎಸ್.ಪಿ.ಸಿ. ಘಟಕ, ಎನ್.ಸಿ.ಸಿ. ಘಟಕ, ರೆಡ್ ಕ್ರಾಸ್, ಸ್ಕೌಟ್-ಗೈಡ್ ಶಾಲಾ ಶುಚಿಕರಣಕ್ಕೆ ನೇತೃತ್ವ ನೀಡಿದರು.