ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ವಿಜ್ಞಾನೋತ್ಸವ ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರುವಾರ ಆರಂಭಗೊಂಡಿತು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಠ್ಯದ ಜತೆಗೆ ಮಕ್ಕಳ ಮನೋ ವಿಕಾಸದಲ್ಲಿ ವಿಜ್ಞಾನೋತ್ಸವ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಮೂರು ದಿನಗಳ ಕಾಲ ನಡೆಯುವ ವಿಜ್ಞಾನ-ಗಣಿತ-ಸಮಾಜ ವಿಜ್ಞಾನ-ವರ್ಕ್ ಎಕ್ಸ್‍ಪೀರಿಯೆನ್ಸ್ ಮೇಳಗಳಲ್ಲಿ ಕುಂಬಳೆ ಉಪಜಿಲ್ಲೆಯ 117 ಶಾಲೆಗಳಿಂದ 4000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ. ಶಾಂತಾ ಅಧ್ಯಕ್ಷ ತೆ ವಹಿಸಿದ್ದರು. ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೆÇಸಲಿಗೆ, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷ ಸಲೀಂ ಎಡನೀರು, ಗ್ರಾಪಂ ಉಪಾಧ್ಯಕ್ಷ ಎಂ. ಅಬ್ಬಾಸ್, ಗ್ರಾಪಂ ಸದಸ್ಯ ಶ್ಯಾಮಪ್ರಸಾದ್ ಮಾನ್ಯ, ವಿಷ್ಣುಪಾಲ, ವೆಕಟರಮಣ ಭಟ್, ಟಿ.ಮಾಧವನ್ ಭಟ್ಟಾದಿರಿ, ಟಿ.ಎಚ್. ಶಾಹಿದಾ ಬೀವಿ, ಶಾಫಿ ಚೂರಿಪಳ್ಳ, ಪಿ. ರೇಷ್ಮಾ, ಪಿ.ಜಿ. ಚಂದ್ರಹಾಸ ರೈ, ಕೆ. ಪ್ರಭಾವತಿ, ಕೆ.ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಎಂ.ಶಶಿಧರ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಪಿ. ಮಿನಿ ವಂದಿಸಿದರು.