ಕಾಸರಗೋಡು: ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ ಕಾಸರಗೋಡು ದಸರಾ ಉದ್ಘಾಟನಾ ಸಮಾರಂಭ ಇಂದು(ಅ. 15) ಸಂಜೆ 5ಕ್ಕೆ ಪಾರೆಕಟ್ಟ ಕನ್ನಡ ಗ್ರಾಮದಲ್ಲಿ ಜರುಗಲಿದೆ. ನೇತ್ರ ತಜ್ಞೆ ಸುಮತಿ ನಾಯಕ್ ಸಮಾರಂಭ ಉದ್ಘಾಟಿಸುವರು. ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು. ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಘಟಕ ಜಗದೀಶ್ ಕೂಡ್ಲು ದಸರಾ ಮಹತ್ವದ ಬಗ್ಗೆ ಉಪನ್ಯಾಸ ನೀಡುವರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡು ನಗರಸಭಾ ಸದಸ್ಯೆ ಶಾರದಾ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭ ಸಮಾಜಸೇವೆಗಾಗಿ ಎಸ್. ಕುಮಾರ್ ಅವರನ್ನು ಗೌರವಿಸಲಾಗುವುದು. ಸಂಜೆ 6ರಿಂದ ಜಗದೀಶ್ ಶಿವಪುರ್ ಅವರಿಂದ ಭಾವ ಗಾನ ವೈಭವ ನಡೆಯುವುದು.