ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ವರದಿಗಾರಿಕೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಡಿಜಿಟಲ್ ತಂಡದ ಜತೆ ಹೈದರಾಬಾದ್‌ಗೆ ಬಂದಿದ್ದ ಪಾಕಿಸ್ತಾನದ ಕ್ರೀಡಾ ನಿರೂಪಕಿ ಝೈನಬ್ ಅಬ್ಬಾಸ್ ಅವರು ಸೋಮವಾರ ದೇಶ ಬಿಟ್ಟು ತೆರಳಿದ್ದಾರೆ.

ಝೈನಬ್ ಈ ಹಿಂದೆ ಮಾಡಿದ್ದ ಭಾರತ ವಿರೋಧಿ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಹರಿದಾಡಿದ್ದು, ಅಭದ್ರತೆ ಕಾಡಿದ್ದರಿಂದ ಅವರು ಭಾರತ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ.
ಆದರೆ 'ವೈಯಕ್ತಿಕ ಕಾರಣ'ಗಳಿಂದ ಭಾರತ ತೊರೆದಿದ್ದಾರೆ ಎಂದು ಐಸಿಸಿ ಹೇಳಿದ್ದು, ಝೈನಬ್ ಅವರನ್ನು ಗಡಿಪಾರು ಮಾಡಲಾಗಿದೆ ಎಂಬ ಸುದ್ದಿಯನ್ನು ಅಲ್ಲಗಳೆದಿದೆ.
ವಿಶ್ವಕಪ್ ಟೂರ್ನಿಯ ಪಂದ್ಯಗಳ ವರದಿಗಾರಿಕೆಗೆ ಭಾರತಕ್ಕೆ ಪ್ರಯಾಣಿಸುವುದಾಗಿ ಅವರು 'ಎಕ್ಸ್' ಖಾತೆಯಲ್ಲಿ ಪ್ರಕಟಿಸಿದ್ದರು. ಅದರ ಬೆನ್ನಲ್ಲೇ ಅವರ ಹಳೆಯ ಟ್ವೀಟ್‌ಗಳು ಹರಿದಾಡಿದ್ದವು.
ಕಳೆದ ವಾರ ಹೈದರಾಬಾದ್‌ಗೆ ಬಂದಿಳಿದಿದ್ದ 35 ವರ್ಷದ ಝೈನಬ್, ಅ.6 ರಂದು ನಡೆದಿದ್ದ ಪಾಕಿಸ್ತಾನ- ನೆದರ್ಲೆಂಡ್ಸ್ ಪಂದ್ಯದ ವೇಳೆ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಹಾಜರಿದ್ದರು. ಪಾಕಿಸ್ತಾನ ತಂಡದ ಪಂದ್ಯಗಳ ವರದಿಗಾರಿಕೆಗಾಗಿ ಅವರು ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ಗೂ ಪ್ರಯಾಣಿಸಬೇಕಿತ್ತು.