ಮುಂಬೈ; ನವರಾತ್ರಿಯ ಮೂರನೇ ದಿನವಾದ ಇಂದು ( ಮಂಗಳವಾರ) ಶಕ್ತಿ ದೇವತೆ ದುರ್ಗೆಯನ್ನು ದೇಶದಾದ್ಯಂತ ವಿವಿಧ ರೀತಿಯ ಅಲಂಕಾರದಿಂದ ಆಕೆಯನ್ನು ಪೂಜಿಸಿ, ಆರಾಧಿಸಲಾಗುತ್ತಿದೆ.
ಮುಂಬೈ; ನವರಾತ್ರಿಯ ಮೂರನೇ ದಿನವಾದ ಇಂದು ( ಮಂಗಳವಾರ) ಶಕ್ತಿ ದೇವತೆ ದುರ್ಗೆಯನ್ನು ದೇಶದಾದ್ಯಂತ ವಿವಿಧ ರೀತಿಯ ಅಲಂಕಾರದಿಂದ ಆಕೆಯನ್ನು ಪೂಜಿಸಿ, ಆರಾಧಿಸಲಾಗುತ್ತಿದೆ.
ಗುಜರಾತ್‌ನ ಸೂರತ್ ಜಿಲ್ಲೆಯ ಊಮಿಯಾ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಅಲಂಕಾರದಿಂದ ಆಕೆಯನ್ನು ಶೃಂಗಾರಿಸಿ, ಆರತಿ ಬೆಳಗುವ ಮೂಲಕ ದೇವಿಯನ್ನು ಆರಾಧಿಸಲಾಗಿದೆ.
ದೆಹಲಿಯ ಛತ್ತರ್‌ಪುರ ದೇವಾಲಯದಲ್ಲಿ ಮುಂಜಾನೆಯೇ ದೇವಿಗೆ ಆರತಿ ಸಲ್ಲಿಸಿದ್ದಾರೆ - ಬೆಳಗಿ, ಪೂಜಾ ಕೈಂಕರ್ಯ ನೆರವೇರಿಸಲಾಗಿದೆ.
ಮುಂಬೈನ ಮುಂಬಾ ದೇವಾಲಯದಲ್ಲಿ ದೇವಿಯನ್ನು ವಿಶೇಷ ಹೂವುಗಳಿಂದ ಅಲಂಕಾರಿಸಿ, ಪೂಜೆ ಸಲ್ಲಿಸಿದ್ದಾರೆ
ನವರಾತ್ರಿಯ ಪ್ರಯುಕ್ತ ಕೇರಳದ ತ್ರಿಶೂರಿನ ಶಾಸ್ತಾ ದೇವಾಲಯದಲ್ಲಿ ದೇವಿಯ ಗೊಂಬೆಗಳನ್ನು ಕೂರಿಸಿ, ವಿಶೇಷವಾಗಿ ಪೂಜೆ ಸಲ್ಲಿಸಲಾಗುತ್ತಿದೆ.