ಅಕ್ಟೋಬರ್ ತಿಂಗಳು ದಸರಾ ರಜೆ ನವರಾತ್ರಿ ಉತ್ಸವಗಳು ಮುಗಿದಿವೆ. ಇನ್ನು ನವೆಂಬರ್ ತಿಂಗಳು ಆರಂಭವಾಗಲಿದೆ. ಕಡಿಮೆ ಇಲ್ಲ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪ್ರಮುಖವಾಗಿ ಆಚರಿಸಲ್ಪಡುವ ದೀಪಾವಳಿ ಹಬ್ಬ ನವೆಂಬರ್ ತಿಂಗಳಿನಲ್ಲಿಯೇ ಬರಲಿದೆ. ಹಾಗಾದ್ರೆ ಇರುವ ಹಬ್ಬ ಹರಿದಿನಗಳು ಯಾವವು ಹಾಗೂ ಆಚರಿಸಬೇಕಾದ ವ್ರತಗಳು ಯಾವವು ನೋಡೋಣ.
ನವೆಂಬರ್ ತಿಂಗಳಿನಲ್ಲಿ ಆಚರಿಸಬೇಕಾದ ವ್ರತಗಳು!
ನವೆಂಬರ್ 1- ಬುಧವಾರ- ಕಾರ್ತಿಕ ಕೃಷ್ಣ ಚತುರ್ಥಿ ಕರ್ವಾ ಚೌತಿ ವ್ರತ ಹಾಗೂ ಸಂಕಷ್ಟ ಚತುರ್ಥಿ
ನವೆಂಬರ್ 5 - ಭಾನುವಾರ - ಅಷ್ಟಮಿ ವೃತ
ನವೆಂಬರ್ 9 ಗುರುವಾರ- ಏಕಾದಶಿ
ನವೆಂಬರ್ 10 ಶುಕ್ರವಾರ ಪ್ರದೋಷ ವ್ರತ
ನವೆಂಬರ್ 11 ಶನಿವಾರ
ಹನುಮಾನ್ ವಿಶೇಷ ಪೂಜೆ
ನವೆಂಬರ್ 12 ಭಾನುವಾರ ಕೇದಾರ ಗೌರಿ ವ್ರತ ಹಾಗೂ ನರಕ ಚತುರ್ದಶಿ, ದೀಪಾವಳಿ
ನವೆಂಬರ್ 13 ಸೋಮವಾರ ಕಾರ್ತಿಕ ಅಮಾವಾಸ್ಯೆ
ನವೆಂಬರ್ 16 ಗುರುವಾರ ವಿನಾಯಕ ಚತುರ್ಥಿ
ನವೆಂಬರ್ 20 ಸೋಮವಾರ ಗೋಪಾಷ್ಟಮಿ
ನವೆಂಬರ್,24 ಶುಕ್ರವಾರ ತುಳಸಿ ಮದುವೆ
ನವೆಂಬರ್ 25 ಶನಿವಾರ ವೈಕುಂಠ ಚತುರ್ಥಶಿ
ನವೆಂಬರ್ 27 ಸೋಮವಾರ ಕಾರ್ತಿಕ ಹುಣ್ಣಿಮೆ
ನವೆಂಬರ್ 28 ಮಂಗಳವಾರ ಮಾರ್ಗಶಿರ್ಷ ಆರಂಭ
ನವೆಂಬರ್ 30 ಗುರುವಾರ ಸಂಕಷ್ಟ ಚತುರ್ಥಿ
ಇವಿಷ್ಟು ನವೆಂಬರ್ ತಿಂಗಳಿನಲ್ಲಿ ಆಚರಿಸಬೇಕಾದ ವ್ರತಗಳಾಗಿದ್ದು ಆಯಾ ಸ್ಥಳೀಯ ಪ್ರದೇಶಗಳಿಗೆ ಅನುಗುಣವಾಗಿ ವ್ರತಾಚಾರಣೆ ಮಾಡಲಾಗುತ್ತದೆ.
ನವೆಂಬರ್ ತಿಂಗಳಿನಲ್ಲಿ ಬರುವ ಹಬ್ಬಗಳು
ನವೆಂಬರ್ 1 ಬುಧವಾರ- ಕನ್ನಡ ರಾಜ್ಯೋತ್ಸವ, ಕರ್ವ ಚೌತ್, ಸಂಕಷ್ಟ ಚತುರ್ಥಿ
ನವೆಂಬರ್ 12 ಭಾನುವಾರ ದೀಪಾವಳಿ, ನರಕ ಚತುರ್ದಶಿ
ನವೆಂಬರ್ 14 ಮಂಗಳವಾರ ಗೋವರ್ಧನ ಪೂಜೆ, ಮಕ್ಕಳ ದಿನಾಚರಣೆ/ಯಾರು ಜಯಂತಿ
ನವೆಂಬರ್ 24 ಶುಕ್ರವಾರ ತುಳಸಿ ಮದುವೆ
ನವೆಂಬರ್ 27 ಸೋಮವಾರ ಗುರುನಾನಕ್ ಜಯಂತಿ
ನವೆಂಬರ್ 30 ಗುರುವಾರ ಕನಕದಾಸ ಜಯಂತಿ
ಇವಿಷ್ಟು ನವೆಂಬರ್ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳಾಗಿದ್ದು ಸರ್ಕಾರಿ ರಜಾ ದಿನಗಳು ಕೂಡ ಹೌದು.