ನವದೆಹಲಿ (PTI): ಬೀದಿ ನಾಯಿಗಳ ಮೇಲೆ ಲಸಿಕಾ ಪ್ರಯೋಗಕ್ಕೆ ಅವಕಾಶ ನೀಡಿ 'ಪ್ರಾಣಿಗಳ ಮೇಲಿನ ಪ್ರಯೋಗಗಳ ನಿಯಂತ್ರಣ ಮತ್ತು ಮೇಲ್ವಿಚಾರಣಾ ಸಮಿತಿ' (ಸಿಪಿಸಿಎಸ್‌ಇಎ) ವರ್ಷದ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.
ನವದೆಹಲಿ (PTI): ಬೀದಿ ನಾಯಿಗಳ ಮೇಲೆ ಲಸಿಕಾ ಪ್ರಯೋಗಕ್ಕೆ ಅವಕಾಶ ನೀಡಿ 'ಪ್ರಾಣಿಗಳ ಮೇಲಿನ ಪ್ರಯೋಗಗಳ ನಿಯಂತ್ರಣ ಮತ್ತು ಮೇಲ್ವಿಚಾರಣಾ ಸಮಿತಿ' (ಸಿಪಿಸಿಎಸ್‌ಇಎ) ವರ್ಷದ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂದಕ್ಕೆ ಪಡೆದಿದೆ.
ಹೊಸ ಲಸಿಕೆಗಳ ಪ್ರಯೋಗಗಳು ಮತ್ತು ಲಸಿಕೆಗಳ ಸವಾಲಿನ ಕುರಿತ ಅಧ್ಯಯನಗಳಿಗೆ ಬೀದಿನಾಯಿಗಳನ್ನು ಬಳಸಬಹುದು ಎಂದು ಸಿಪಿಸಿಎಸ್‌ಇಎ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಶಿಫಾರಸು ಮಾಡಿತ್ತು.
ಸಮಿತಿಯ ಈ ನಿರ್ಧಾರವನ್ನು ಪೀಪಲ್ ಫಾರ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (ಪೆಟಾ) ತರಾಟೆಗೆ ತಗೆದುಕೊಂಡಿತ್ತು. ಸಮಿತಿಯ ಈ ಶಿಫಾರಸು ಬೀದಿ ನಾಯಿಗಳಿಗೆ ಮಾತ್ರವಲ್ಲದೆ, ಇತರ ಪ್ರಾಣಿಗಳಿಗೂ ಕುತ್ತು ತರುತ್ತದೆ' ಎಂದು ಎಚ್ಚರಿಸಿತ್ತು.
ಪೆಟಾದ ವಿಚಾರಗಳನ್ನು ಮಾನ್ಯ ಮಾಡಿದ ಸಿಪಿಸಿಎಸ್‌ಇಎ ತಾನು ಕಳೆದ ವರ್ಷದ ಹೊರಡಿಸಿದ್ದ ಸುತ್ತೋಲೆಯನ್ನು ಅಕ್ಟೋಬರ್ 5ರಂದು ಹಿಂಪಡೆದಿದೆ.
'ವಿಜ್ಞಾನ, ಪ್ರಾಣಿಗಳ ಕ್ಷೇಮಾಭಿವೃದ್ಧಿ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ಪ್ರತಿಗಾಮಿ ನೀತಿಯನ್ನು ಹಿಂಪಡೆದಿರುವುದು ಶ್ಲಾಘನೀಯ' ಎಂದು ಪೆಟಾ-ಇಂಡಿಯಾದ ವಿಜ್ಞಾನಿ ನೀತಿ ಸಲಹೆಗಾರರಾದ ಡಾ. ಅಂಕಿತಾ ಪಾಂಡೆ ತಿಳಿಸಿದ್ದಾರೆ.