ಗುರುವಾಯೂರು: ರಾತ್ರಿ ಪೂಜೆಯ ನಂತರ ಗುರುವಾಯೂರು ದೇವಸ್ಥಾನದ ಮೇಲ್ಶಾಂತಿ ತೊಟ್ಟಂ ಶಿವಕರನ್ ನಂಬೂದಿರಿ ಚಿನ್ನದ ಹೆಬ್ಬಾಗಿಲು ಇಳಿದರು.
ಗುರುವಾಯೂರು ದೇವಸ್ಥಾನದ ಸ್ವರ್ಣ ಬಾಗಿಲಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ನಿನ್ನೆ ರಾತ್ರಿ ಹೊರ ಬಂದಿದ್ದಾರೆ. ನಿನ್ನೆ ರಾತ್ರಿ ಪೂಜೆಯ ನಂತರ ಸಂಪೂರ್ಣ ಸ್ವಯಂ ತ್ಯಾಗದೊಂದಿಗೆ, ಹೆಗ್ಗುರುತಾಗಿರುವ ಬೀಗದ ಕೈಯನ್ನು ದೇವಾಲಯ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ಶಿವಕರನ್ ನಂಬೂದಿರಿ ಅವರು ಆರು ತಿಂಗಳ ಕಾಲ ಗುರುವಾಯೂರಿನ ಕಣ್ಣನಿಗೆ ಸೇವೆ ಸಲ್ಲಿಸಿದರು, ಬೆಳಿಗ್ಗೆ ನಿರ್ಮಾಲ್ಯದಿಂದ ರಾತ್ರಿ ಪೂಜೆಯವರೆಗೆ ಪ್ರತಿ ಪೂಜೆಯನ್ನು ಮಾಡಿದ್ದರು. ಮಧ್ಯಾಹ್ನದ ಪೂಜೆಗೆ ಕಣ್ಣನನ್ನು ಸುಂದರವಾಗಿ ಅಲಂಕರಿಸುತ್ತಿದ್ದರು. ತೊಟ್ಟಂ ಶಿವಕರನ್ ನಂಬೂದಿರಿ ಅವರು ಒಂದೂವರೆ ದಶಕಗಳಿಂದ ಮೇಲ್ಶಾಂತಿ ನೇಮಕಕ್ಕೆ ಅರ್ಜಿ ಸಲ್ಲಿಸಿದ್ದರು. ಮೇಲ್ಶಾಂತಿ ನೇಮಕಾತಿಗೆ ವಯೋಮಿತಿ 60ಕ್ಕೆ ನಿಗದಿ ಮಾಡಿರುವುದರಿಂದ ಅವರಿಗೆ ಅವಕಾಶವಿಲ್ಲ ನೀಡಿರಲಿಲ್ಲ.
ಶಿವಕರನ್ ನಂಬೂದಿರಿ ಅವರು ಮೂವತ್ತಕ್ಕೂ ಹೆಚ್ಚು ಬಾರಿ ಮೇಲ್ಶಾಂತಿ ನೇಮಕಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವಕಾಶ ಸಿಕ್ಕಿದ್ದು 58ನೇ ವಯಸ್ಸಿನಲ್ಲಿ. ವೇದಾಧ್ಯಾಪಕ, ಯೋಗಶಿಕ್ಷಕ, ಸಂಸ್ಕøತ ಅಧ್ಯಾಪಕ, ಸಂಶೋಧಕ ಹೀಗೆ ನಾನಾ ಕ್ಷೇತ್ರಗಳಲ್ಲಿ ಪರಿಣತಿ ಪಡೆದಿರುವ ಶಿವಕರನ್ ನಂಬೂದಿರಿ ಅವರು ಪ್ರಸಿದ್ಧ ಆಯುರ್ವೇದ ವೈದ್ಯರೂ ಹೌದು.
ದೇವಸ್ಥಾನದ ನೂತನ ಮೇಲ್ಶಾಂತಿ ಬೆಟ್ಟುಕ್ಕುಳಿ ಶ್ರೀನಾಥ ನಂಬೂದಿರಿ ಅವರು ಮುಂದಿನ ಆರು ತಿಂಗಳ ಕಾಲ ಮೇಲ್ಶಾಂತಿಯಾಗಿ ನಿನ್ನೆ ಅಧಿಕಾರ ಸ್ವೀಕರಿಸಿದರು.