ಲಂಡನ್: ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಸುರಕ್ಷತಾ ಸಂಸ್ಥೆಯನ್ನು ಬ್ರಿಟನ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ರಿಷಿ ಸುನಕ್ ಗುರುವಾರ ಘೋಷಿಸಿದ್ದಾರೆ.
ಲಂಡನ್: ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಸುರಕ್ಷತಾ ಸಂಸ್ಥೆಯನ್ನು ಬ್ರಿಟನ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ರಿಷಿ ಸುನಕ್ ಗುರುವಾರ ಘೋಷಿಸಿದ್ದಾರೆ.
ಮುಂದಿನ ವಾರ ನಡೆಯಲಿರುವ ಜಾಗತಿಕ ಎ.ಐ ಸುರಕ್ಷತಾ ಶೃಂಗಸಭೆಯ ಆತಿಥ್ಯವನ್ನು ಬ್ರಿಟನ್ ವಹಿಸಲಿದ್ದು, ಇದರ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯು ಎ.ಐ. ತಂತ್ರಜ್ಞಾನದಿಂದಾಗುವ ಅಪಾಯಗಳ ಕುರಿತು ಎಚ್ಚರಿಕೆ ನೀಡಲಿದೆ ಮತ್ತು ಅದರ ಬಳಕೆಯ ಕುರಿತು ಮೌಲ್ಯಮಾಪನ ಮಾಡಲಿದೆ ಎಂದರು.
ಕೃತಕ ಬುದ್ಧಿಮತ್ತೆ (ಎ.ಐ) ಹೊಸ ಪ್ರಕಾರದ ಪ್ರಯೋಗಗಳಿಗೆ ದೇಶವು ಮುಂದಾಳತ್ವ ವಹಿಸಲಿದೆ ಎಂದೂ ಹೇಳಿದ್ದಾರೆ.
ಎ.ಐ ತಂತ್ರಜ್ಞಾನವು ವಿವಿಧ ಕ್ಷೇತ್ರಗಳಲ್ಲಿ ಪರಿವರ್ತನೆ ತರುವುದರ ಜೊತೆಗೆ ಹೊಸ ಅಪಾಯಗಳನ್ನೂ ತಂದೊಡ್ಡಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಾಗಿದೆ ಎಂದು ತಿಳಿಸಿದರು.
ರಸಾನಿಕ ಅಥವಾ ಜೈವಿಕ ಅಸ್ತ್ರಗಳನ್ನು ಎ.ಐ. ತಂತ್ರಜ್ಞಾನ ಬಳಸಿ ಸುಲಭವಾಗಿ ನಿರ್ಮಿಸಬಹುದು. ಭಯೋತ್ಪಾದಕ ಸಂಘಟನೆಗಳೂ ಇದನ್ನು ಬಳಸುವ ಅಪಾಯವಿದೆ. ವಂಚನೆ, ಸೈಬರ್ ದಾಳಿಗೂ ಇದು ಬಳಕೆಯಾಗುವ ಸಾಧ್ಯತೆ ಇದೆ' ಎಂದಿದ್ದಾರೆ.