HEALTH TIPS

ಯಕ್ಷಗಾನದಿಂದ ಭಾಷೆ, ಸಂಸ್ಕøತಿಯ ಜಾಗೃತಿ : ಎಡನೀರು ಶ್ರೀ : ಕೋಟೆಕಣಿಯಲ್ಲಿ ರಂಗಪ್ರವೇಶ ಉದ್ಘಾಟಿಸಿ ಆಶೀರ್ವಚನ

                 ಕಾಸರಗೋಡು: ಈ ಮಣ್ಣಿನ ಹೆಮ್ಮೆಯ ಸರ್ವಾಂಗ ಕಲೆಯಾದ ಯಕ್ಷಗಾನದ ಮೂಲಕ ಕನ್ನಡ ಭಾಷೆಯನ್ನು ಮತ್ತು ಪರಂಪರಾಗತ ಸಂಸ್ಕøತಿಯನ್ನು ಉಳಿಸಿ, ಬೆಳೆಸಲು ಸಹಾಯಕವಾಗಿದೆ. ಸಾಹಿತ್ಯ ಕಲೆಗಳು ಸಂಸ್ಕಾರವನ್ನು ಬೆಳೆಸುತ್ತದೆ ಹಾಗು ಭಾಷಾಭಿಮಾನವನ್ನು ಉದ್ದೀಪಿಸುತ್ತದೆ. ಪಂಡಿತ ಪಾಮರರೆನ್ನದೆ ಎಲ್ಲರನ್ನೂ ಆಕರ್ಷಿಸುವುದು ಮಾತ್ರವಲ್ಲದೆ ಅವರನ್ನು ಸಾಂಸ್ಕøತಿಕ ಔನತ್ಯಕ್ಕೇರಿಸುವಲ್ಲಿ ಯಕ್ಷಗಾನ ಕಲೆ ಪ್ರಮುಖ ಪಾತ್ರವಹಿಸುತ್ತದೆ. ಭಾಷೆ, ಸಾಹಿತ್ಯದ ಅಭಿವೃದ್ಧಿಯ ಜೊತೆಗೆ ಪೌರಾಣಿಕ ಕಥೆಗಳು ಜನರಲ್ಲಿ ಮನದಟ್ಟು ಮಾಡುವಲ್ಲಿಯೂ ಯಕ್ಷಗಾನದಿಂದ ಸಾಧ್ಯವಾಗುತ್ತದೆ ಎಂದು ಎಡನೀರು ಮಠಾಧೀಶ ಪರಮಪೂಜನೀಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು. 

               ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ನಡೆದ ಯಕ್ಷಗಾನ ರಂಗಪ್ರವೇಶ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀಗಳು ಮಾತನಾಡಿ ಆಶೀರ್ವದಿಸಿದರು.  

              ಶ್ರೀ ರಾಮನಾಥ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ರಂಗಪ್ರವೇಶ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.  ಯಕ್ಷಗಾನ ಕಲಾವಿದೆ ಆರ್ಶಿಯ ತನು ವಿಟ್ಲ, ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ, ಡಾ.ಸಿ.ಎಚ್.ಜನಾರ್ದನ ನಾಯ್ಕ್, ಉದ್ಯಮಿ ಸುರೇಶ್ ಅತಿಥಿಗಳಾಗಿ ಭಾಗವಹಿಸಿದರು. 

             ಇದೇ ವೇಳೆ ಸಮಾಜ ಸೇವೆಗಾಗಿ ರವಿ ಕೇಸರಿ ಹಾಗು ಯಕ್ಷಗಾನ ಕಲಾವಿದ ಮುಕುಂದ ರಾಜ್ ಕೆ., ಯಕ್ಷಗಾನ ಕಲಾವಿದೆ ಆರ್ಸಿಯ ತನು ವಿಟ್ಲ ಅವರಿಗೆ ದಸರಾ ಗೌರವಾರ್ಪಣೆ ನಡೆಯಿತು. ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ಅವರಿಗೆ ಗುರುವಂದನೆ ನಡೆಯಿತು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಡಾ.ಜಯಶ್ರೀ ನಾಗರಾಜ್, ದಿವಾಕರ ಅಶೋಕ್‍ನಗರ, ಸತ್ಯನಾರಾಯಣ, ಕಿರಣ್ ಕಲಾಂಜಲಿ ಮೊದಲಾದವರು ಉಪಸ್ಥಿತರಿದ್ದರು. 

            ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲತಾ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಅನ್ವಿತಾ ಪ್ರಾರ್ಥನೆ ಹಾಡಿದರು. ಅರುಣ ಕುಮಾರಿ ಸಿ.ಎಚ್. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ರಾಮನಾಥ ಸಾಂಸ್ಕøತಿಕ ಯಕ್ಷಗಾನ ತರಬೇತಿ ಕೇಂದ್ರದ ಮಕ್ಕಳಿಂದ  ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries