ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಆಗಸ್ಟ್ವರೆಗೆ ಭಾರತದಿಂದ ಮೊಬೈಲ್ ಫೋನ್ ರಫ್ತು ದ್ವಿಗುಣವಾಗಿದೆ ಎಂದು ಮೊಬೈಲ್ ಉದ್ಯಮ ಸಂಸ್ಥೆ ಐಸಿಇಎ ಮಾಹಿತಿ ನೀಡಿದೆ. ಏಪ್ರಿಲ್-ಆಗಸ್ಟ್ 2023ರಲ್ಲಿ ಭಾರತದಿಂದ ಮೊಬೈಲ್ ಫೋನ್ ರಫ್ತು ಸುಮಾರು ಮೂರು ಶತಕೋಟಿ ಡಾಲರ್ (ಸುಮಾರು 24,850 ಕೋಟಿ ರೂ.) ಆಗಿದೆ ಎಂದು ತಿಳಿಸಿದೆ.
ಷರತ್ತಿನ ಮೇಲೆ ತಂತ್ರಾನ ಕಂಪನಿ ಆಪಲ್ 23,000 ಕೋಟಿ ರೂಪಾಯಿ ಮೌಲ್ಯದ ಐಫೋನ್ಗಳನ್ನು ರಫ್ತು ಮಾಡಿದೆ. ಇದು ಒಟ್ಟು ರಫ್ತಿನ ಅರ್ಧಕ್ಕಿಂತ ಸ್ವಲ್ಪ ಹೆಚ್ಚಾಗಿದೆ ಎಂದು ಮೂಲವೊಂದು ತಿಳಿಸಿದೆ.
ಆದರೆ ಆಯಪಲ್ನಿಂದ ಈ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಾರತದಲ್ಲಿ ಮೊಬೈಲ್ ಫೋನ್ ರ್ತು ಶೇಕಡಾ 80ಕ್ಕಿಂತ ಹೆಚ್ಚು ಹೆಚ್ಚಳವಾಗಿದೆ ಎಂದು ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಅಧ್ಯ ಪಂಕಜ್ ಮೊಹಿಂದ್ರೂ ಹೇಳಿದ್ದಾರೆ.