ಕಾಸರಗೋಡು: ನಗರದ ಆಲಂಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾಸರಗೋಡು ಉಪಜಿಲ್ಲಾ 64ನೇ ಶಾಲಾ ಕ್ರೀಡಾ ಕೂಟದ ಸಮಾರೋಪ ಸಮಾರಂಭವನ್ನು ಉದುಮ ಶಾಸಕ ವಕೀಲ ಸಿ. ಎಚ್. ಕುಂಜಾಂಬು ಉದ್ಘಾಟಿಸಿದರು.
ಕ್ರೀಡಾ ಕೂಟದಲ್ಲಿ ಪ್ರಶಸ್ತಿ ವಿಜೇತ ಶಾಲೆಗಳಿಗೆ ಶಾಸಕ ಸಿ.ಎಚ್ ಕುಞಂಬು ಬಹುಮಾನ ವಿತರಿಸಿದರು. ಈ ಸಂದರ್ಭ 2023-24ನೇ ಸಾಲಿನಲ್ಲಿ ನಿವೃತ್ತರಾಗಲಿರುವ ಕ್ರೀಡಾ ಶಿಕ್ಷಕರಾದ ವಿಶ್ವನಾಥ ಭಟ್ (ಜಿಎಚ್‍ಎಸ್‍ಎಸ್ ಕಾಸರಗೋಡು), ಸೂರ್ಯ ನಾರಾಯಣ ಭಟ್ (ಸರ್ಕಾರಿ ಬಾಲಕಿಯರ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ನೆಲ್ಲಿಕುಂಜೆ), ವೆಂಕಟರಮಣ ಭಟ್ (ಎಸ್.ಜಿ.ಕೆ.ಎಚ್.ಎಸ್.ಕೂಡ್ಲು) ಹಾಗೂ ಬಾಬು ಥಾಮಸ್ (ಜಿ.ಎಚ್.ಎಸ್.ಎಸ್. ಬೇತೂರುಪಾರ) ಅವರನ್ನು ಸನ್ಮಾನಿಸಲಾಯಿತು.
ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಕಾದರ್ ಬದರಿಯಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಸಂಚಾಲಕ ಪಿ.ನಾರಾಯಣನ್, ಪ್ರಾಥಮಿಕ ವಿಭಾಗದ ಸಂಚಾಲಕ ಕೆ.ಮಧು, ಶಾಲಾ ಪಿಟಿಎ ಅಧ್ಯಕ್ಷ ಅಬ್ದುಲ್‍ಶರೀಫ್, ಕೆಎಸ್‍ಡಿಎಸ್‍ಜಿಎ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಹಾಜಿ, ಕಾದರ್ ಪಾಲೋತ್ ಮಾತನಾಡಿದರು.ಉಪ ಜಿಲ್ಲಾ ಕ್ರೀಡಾ ಮೇಳದ ಪ್ರಧಾನ ಸಂಚಾಲಕ ಎಇಒ ಆಗಸ್ಟಿನ್ ಬರ್ನಾಡ್ ಮೊಂತೆರೊ ಸ್ವಾಗತಿಸಿ, ಜಿಎಚ್‍ಎಸ್‍ಎಸ್ ಆಲಂಪಾಡಿಯ ಪ್ರತಿಭಾನ್ವಿತ ಶಿಕ್ಷಕ ಸಿ.ಜಿ.ಮ್ಯಾಥ್ಯೂ ವಂದಿಸಿದರು.