ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಬೀರಂತಬೈಲ್ ಕಾಸರಗೋಡು ಇದರ ವತಿಯಿಂದ ಕೊಡಮಾಡುವ 2022-23 ನೇ ಸಾಲಿನ ಪ್ರತಿಭಾ ಪುರಸ್ಕಾರ, ಆರ್ಥಿಕ ಸಹಾಯ ಧನ, ಅಭಿನಂದನ ಕಾರ್ಯಕ್ರಮವನ್ನು ಜಿಲ್ಲಾ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. 2023 ನೇ ಮಾರ್ಚ್ ಎಪ್ರಿಲ್‍ನಲ್ಲಿ ನಡೆದ ಪರೀಕ್ಷೆಯಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಎ ಪ್ಲಸ್, ಉಪಸಂಘದಲ್ಲಿ ಅತ್ಯಂತ ಅಧಿಕ ಅಂಕಗಳಿಸಿದ ಮತ್ತು ತೇರ್ಗಡೆ ಹೊಂದಿದ ಎಲ್ಲರಿಗೂ, ಪ್ಲಸ್ ಟು ಮತ್ತು ಕರ್ನಾಟಕ ಪಿಯುಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದವರಿಗೆ, ಎಂಜಿನಿಯರ್, ಮೆಡಿಕಲ್, ಪಾಲಿಟೆಕ್ನಿಕ್, ಟಿಟಿಸಿ/ಬಿಎಡ್ ನಲ್ಲಿ ಕಲಿಯುವ ಒಬ್ಬೊಬ್ಬ ವಿದ್ಯಾರ್ಥಿಗೆ ಆರ್ಥಿಕ ಸಹಾಯ ನೀಡಲಾಗುವುದು. ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸಾಂಸ್ಕøತಿಕ ಕಾರ್ಯಕ್ರಮ, ಕ್ರೀಡಾಕೂಟದಲ್ಲಿ ಪ್ರಥಮ ಬಹುಮಾನ ಗಳಿಸಿದವರನ್ನು ಅಭಿನಂದಿಸಲಾಗುವುದು.
ಅರ್ಜಿಯ ನಮೂನೆಯನ್ನು ಉಪಸಂಘದ ಕಾರ್ಯದರ್ಶಿಯವರಿಂದ ಅಥವಾ ಜಿಲ್ಲಾ ಸಂಘದ ಕಾರ್ಯದರ್ಶಿಯವರಿಂದ ಪಡೆದು ಭರ್ತಿ ಮಾಡಿ ಉಪಸಂಘದ ಕಾರ್ಯದರ್ಶಿ, ಜಿಲ್ಲಾ ಸಂಘದ ಕಾರ್ಯದರ್ಶಿಯವರಿಗೆ 30-10-2023 ರ ಮುಂಚಿತವಾಗಿ ತಲುಪಿಸಬೇಕು. ಅಪೂರ್ಣವಾದ ಮತ್ತು ವಿಳಂಬವಾದ ಅಪೇಕ್ಷೆಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಸಂಘದ ಕಾರ್ಯದರ್ಶಿ ಸತೀಶ್ ಕುಮಾರ್ ದೋಣಿಬಾಗಿಲು ಅವರನ್ನು ಸಂಪರ್ಕಿಸಬಹುದು. ಮೊಬೈಲ್ ನಂ.: 9895826642.