ಛತ್ರಪತಿ ಸಂಭಾಜಿನಗರ(PTI): ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತುಳಜಾಪುರದಲ್ಲಿರುವ ತುಳಜಾ ಭವಾನಿ ದೇವಸ್ಥಾನ ಆವರಣವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ವಿರೋಧಿಸಿ ದೇವಸ್ಥಾನ ಬಳಿಯ ವರ್ತಕರು ಹಾಗೂ ಅರ್ಚಕರು ಬುಧವಾರ ಬಂದ್‌ಗೆ ನೀಡಿದ್ದರು.
'ಉದ್ದೇಶಿತ ಅಭಿವೃದ್ಧಿ ಯೋಜನೆ ವಿರೋಧಿಸಿ ನಡೆದ ಬಂದ್‌ನಲ್ಲಿ 5 ಸಾವಿರ ಅಂಗಡಿಗಳ ಮಾಲೀಕರು ಪಾಲ್ಗೊಂಡಿದ್ದರು' ಎಂದು ಅರ್ಚಕರ ಸಂಘದ ಅಧ್ಯಕ್ಷ ಕಿಶೋರ್ ಗಗನೆ ಹೇಳಿದ್ದಾರೆ.
'ಉದ್ದೇಶಿತ ಅಭಿವೃದ್ಧಿ ಯೋಜನೆ ಪ್ರಕಾರ, ದೇವಸ್ಥಾನದಿಂದ ದೂರ ಸ್ಥಳದಲ್ಲಿ ದರ್ಶನ ಮಂಟಪವನ್ನು ನಿರ್ಮಿಸಲಾಗುತ್ತದೆ. ದೇವಿಯ ದರ್ಶನಕ್ಕಾಗಿ ಭಕ್ತರು ದೇವಸ್ಥಾನದ ಹಿಂಭಾಗದಲ್ಲಿರುವ ದ್ವಾರದ ಮೂಲಕ ಬರಬೇಕಾಗುತ್ತದೆ. ಇದಕ್ಕೆ ನಮ್ಮ ವಿರೋಧವಿದೆ' ಎಂದು ಕಿಶೋರ್ ಗಗನೆ ಹೇಳಿದ್ದಾರೆ.
₹1,300 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಆವರಣವನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ.