ನವದೆಹಲಿ: ಬ್ಯಾಂಕಿಂಗ್ ಸಂಸ್ಥೆಗಳ ಮೇಲೆ ನಿಯಂತ್ರಣ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇದೀಗ ಬ್ಯಾಂಕ್ ಆಫ್ ಬರೋಡ ವಿರುದ್ಧ ಕ್ರಮವೊಂದನ್ನು ಜರುಗಿಸಿದೆ. ಈ ಕುರಿತು ಆರ್ಬಿಐ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಲ್ಲದೆ ತನ್ನ ಸೋಷಿಯಲ್ ಮೀಡಿಯಾದಲ್ಲೂ ಮಾಹಿತಿ ಪ್ರಕಟಿಸಿದೆ.

ಬ್ಯಾಂಕ್ ಆಫ್ ಬರೋಡ ಮೇಲೆ ಅಧಿಕಾರಿ ಚಲಾಯಿಸಿರುವುದಾಗಿ ಹೇಳಿಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 35ಎ ಪ್ರಕಾರ ಕ್ರಮ ಜರುಗಿಸಿರುವುದಾಗಿಯೂ ತಿಳಿಸಿದೆ.
ಬ್ಯಾಂಕ್ ಆಫ್ ಬರೋಡಗೆ ತಕ್ಷಣವೇ ಜಾರಿಗೆ ಬರುವಂತೆ 'ಬಾಬ್ ವರ್ಲ್ಡ್' ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಮ್ಮ ಗ್ರಾಹಕರನ್ನು ಆನ್‌ಬೋರ್ಡಿಂಗ್ ಮಾಡುವುದನ್ನು ಅಮಾನತುಗೊಳಿಸುವಂತೆ ಆರ್ಬಿಐ ಈ ಮೂಲಕ ನಿರ್ದೇಶನ ನೀಡಿದೆ.
ಬ್ಯಾಂಕ್ ಆಫ್ ಬರೋಡದ ಬಾಬ್ ವರ್ಲ್ಡ್ ಅಪ್ಲಿಕೇಷನ್ನಲ್ಲಿ ಗ್ರಾಹಕರನ್ನು ಆನ್‌ಬೋರ್ಡಿಂಗ್ ಮಾಡುವ ವಿಧಾನದಲ್ಲಿ ಕೆಲವು ಲೋಪ ಇರುವುದನ್ನು ಗಮನಿಸಿ ಬ್ಯಾಂಕ್ ವಿರುದ್ಧ ಆರ್ಬಿಐ ಈ ಕ್ರಮ ಜರುಗಿಸಿದೆ. ಇನ್ನು ಈ ಆಯಪ್ಗೆ ಗ್ರಾಹಕರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಕ್ಕೂ ಮುನ್ನ ಈಗಾಗಲೇ ಸೂಚಿಸಲಾದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಬ್ಯಾಂಕ್ಗೆ ತಿಳಿಸಲಾಗಿದೆ.
ಆದರೆ ಈಗಾಗಲೇ ಆನ್‌ಬೋರ್ಡ್‌ನಲ್ಲಿರುವ 'ಬಾಬ್ ವರ್ಲ್ಡ್' ಗ್ರಾಹಕರು ಈ ಅಮಾನತಿನ ಕಾರಣದಿಂದಾಗಿ ಯಾವುದೇ ಅಡಚಣೆಯನ್ನು ಎದುರಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆಯೂ ಬ್ಯಾಂಕ್ ಆಫ್ ಬರೋಡಗೆ ಆರ್ಬಿಐ ನಿರ್ದೇಶನ ನೀಡಿದೆ. ಹೀಗಾಗಿ ಹೊಸ ಗ್ರಾಹಕರಿಗಷ್ಟೇ ಇದರಿಂದ ತೊಂದರೆ ಆಗಬಹುದಾಗಿದ್ದು, ಈಗಾಗಲೇ ಆಯಪ್ ಬಳಸುತ್ತಿರುವವರಿಗೆ ತೊಂದರೆ ಆಗುವ ಸಾಧ್ಯತೆ ಇಲ್ಲ.