ತಿರುವನಂತಪುರ: ಕೆ.ಎಸ್.ಎಫ್.ಇ.ಯ ಮೊಬೈಲ್ ಅಪ್ಲಿಕೇಶನ್ ಕೆ.ಎಸ್.ಎಫ್.ಇ. ಪವರ್ ಅನ್ನು ಸಚಿವ ಕೆ.ಎನ್. ಬಾಲಗೋಪಾಲ್ ಇಂದು ಲೋಕಾರ್ಪಣೆಗೊಳಿಸಿರುವರು.
ಇನ್ನು ಕೆ.ಎಸ್.ಎಫ್.ಇ. ಪವರ್ ಮೂಲಕ ಎಲ್ಲಾ ಚಿಟ್ ವಹಿವಾಟುಗಳನ್ನು ಸುಲಭವಾಗಿ ಮಾಡಬಹುದಾಗಿದ್ದು, ಕೆ.ಎಸ್.ಎಫ್.ಇ. ಬಂಡವಾಳವನ್ನು ದ್ವಿಗುಣಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು.
ತಿರುವನಂತಪುರಂ ರೆಸಿಡೆನ್ಸಿ ಟವರ್ ಕಾನ್ಫರೆನ್ಸ್ ಹಾಲ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಆಂಟನಿ ರಾಜು ವಹಿಸಿದ್ದರು. ಕೆ.ಎಸ್.ಎಫ್.ಇ. ಅಧ್ಯಕ್ಷ ಕೆ. ವರದರಾಜನ್, ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್.ಕೆ. ಸನಿಲ್, ಆಡಳಿತ ಮಂಡಳಿ ಸದಸ್ಯ ಡಾ. ಶಶಿಕುಮಾರ್, ತಂಬನೂರು ವಾರ್ಡ್ ಕೌನ್ಸಿಲರ್ ಸಿ. ಹರಿಕುಮಾರ್. ಕೆಎಸ್‍ಎಫ್‍ಇಎಸ್‍ಎ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಪಿಳ್ಳೈ, ಕೆಎಸ್‍ಎಫ್‍ಇಒಎ ಪ್ರಧಾನ ಕಾರ್ಯದರ್ಶಿ ಎನ್.ಎ. ಮನ್ಸೂರ್, ಕೆಎಸ್‍ಎಫ್‍ಇಒಯು ಪ್ರಧಾನ ಕಾರ್ಯದರ್ಶಿ ಎಸ್. ಅರುಣ್ ಬೋಸ್, ಎಫ್.ಇ.ಇ.ಎ ಪ್ರಧಾನ ಕಾರ್ಯದರ್ಶಿ ಎಸ್. ವಿನೋದ್ ಭಾಗವಹಿಸಿದ್ದರು.