ಕಾಸರಗೋಡು: ಜಿಲ್ಲೆಯ ವಿವಿಧ ಶಕ್ತಿ ಕೇಂದ್ರಗಳಲ್ಲಿ ನವರಾತ್ರಿ ಮಹೋತ್ಸವ ಭಾನುವಾರ ಆರಂಭಗೊಂಡಿತು. ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಾಸರಗೋಡು ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ಶೀ ಮಹಾದೇವಿ ದೇವಸ್ಥಾನ, ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನ, ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನ, ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನ, ಪೆರ್ಲ ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರೀ ಭಜನಾಮಂದಿರ ಸೇರಿದಂತೆ ದೇವೀ ಕ್ಷೇತ್ರಗಳಲ್ಲಿ ನವರಾತ್ರಿ ಮಹೋತ್ಸವ ಆರಂಭಗೊಂಡಿತು.
ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ಕ್ಷೇತ್ರದಲ್ಲಿ ಬೆಳಗ್ಗೆ ಶ್ರೀ ಮಹಾಗಣಪತಿ ಹೋಮ, ಭಂಡಾರದ ಮೆನೆಯಿಂದ ದೇವಸ್ಥಾನಕ್ಕೆ ಭಂಡಾರದ ಆಗಮನ, ಶುದ್ಧಿಕಲಶ, ಚಂಡಿಕಾಹೋಮ, ಮಹಾಪೂಜೆ, ದರ್ಶನ, ವಿಶೇಷ ಪೂಜೆ ನೆರವೇರಿತು. ಅ.17ರಂದು ರಾತ್ರಿ ತುಪ್ಪ ಸೇವೆ, 22ರಂದು ಬಟ್ಟಲು ಮೆರವಣಿಗೆ, ಬಟ್ಟಲು ಸೇವೆ ನಡೆಯುವುದು.
ಕೊರಕ್ಕೋಡು ಶ್ರೀ ಆರ್ಯಕಾತ್ರ್ಯಾಯಿನಿ ಕ್ಷೇತ್ರದಲ್ಲಿ ಭಾನುವಾರ ಶ್ರೀ ಮಹಾಗಣಪತಿ ಹೋಮದೊಂದಿಗೆ ನವರಾತ್ರಿ ಮಹೋತ್ಸವ ಆರಂಭಗೊಮಡಿತು.