ಕಾಸರಗೋಡು: ಕಾಞಂಗಾಡು ನಗರಸಭಾ ಆರೋಗ್ಯ ವಿಭಾಗವು ನಗರದ ಹೋಟೆಲ್‍ಗಳಲ್ಲಿ ಮಿಂಚಿನ ತಪಾಸಣೆ ನಡೆಸಿ, ಹಳಸಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದೆ. ಹಳಸಿದ ಅನ್ನ ಹೆಚ್ಚಿನ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಹಳಸಿದ ಚಿಕನ್, ಬೀಫ್ ಫ್ರೈ, ಹುರಿದ ಮೀನು ಪತ್ತೆಯಾಗಿವೆ. ವಶಪಡಿಸಿಕೊಂಡ ಹಳಸಿದ ಆಹಾರ ವಸ್ತುಗಳನ್ನು ನಾಶಪಡಿಸಲಾಗಿದೆ. ದಂಡ ಪಾವತಿಸಲು ಹೊಟೇಲ್‍ಗಳಿಗೆ ನೋಟಿಸ್ ನೀಡಲಾಯಿತು. ನಗರದ ಒಟ್ಟು 12ಹೋಟೆಲ್‍ಗಳಲ್ಲಿ ತಪಾಸಣೆ ನಡೆಸಲಾಯಿತು. ಕ್ಲೀನ್ ಸಿಟಿ ವ್ಯವಸ್ಥಾಪಕ ಶೇನ್ ಪಿ ಜೋಸ್ ತಪಾಸಣೆ ನಡೆಸಿದರು.
ಕಾರ್ಯಾಚರಣೆಯಲ್ಲಿ ಸಾರ್ವಜನಿಕ ನಿರೀಕ್ಷಕರಾದ ಕೆ.ಶಿಜು, ಬಿಜು ಆನೂರು, ಪಿ.ಟಿ.ರೂಪೇಶ್ ಭಾಗವಹಿಸಿದ್ದರು. ಶುಚಿತ್ವ ಹಾಗೂ ಉತ್ತಮ ಆಹಾರ ಪೂರೈಕೆಯಲ್ಲಿ ಯಾವುದೇ ಲೋಪಕಂಡುಬಂದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೋಟೆಲ್‍ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತ ತಿಳಿಸಿದ್ದಾರೆ.