ಮಲಪ್ಪುರಂ: ಗ್ರಾಮ ಕಚೇರಿ ಅಧಿಕಾರಿಗಳಿಗೆ ಅಧಿಕೃತ ಪ್ರವಾಸಕ್ಕೆಂದು ಸರ್ಕಾರ ಸೈಕಲ್‍ಗೆ ಅನುಮತಿ ನೀಡಿದ ಅಪೂರ್ವ ಘಟನೆ ವರದಿಯಾಗಿದೆ. ಕಾರು ನೀಡುವಂತೆ ಗ್ರಾಮ ಕಚೇರಿ ಅಧಿಕಾರಿಗಳ ಮನವಿಯನ್ನು ತಿರಸ್ಕರಿಸಿದ ಸರ್ಕಾರ ಸೈಕಲ್ ಕೊಳ್ಳಲು ಅವಕಾಶ ನೀಡಿದೆ. ಅಗತ್ಯವಿಲ್ಲದಲ್ಲಿ ಶುಕ್ರವಾರದೊಳಗೆ ತಿಳಿಸಬಹುದು ಎಂದೂ ಸೂಚನೆ ನೀಡಲಾಗಿದೆ.
ಕ್ಷೇತ್ರ ಪರಿಶೀಲನೆಗೆ ಕಾರ್ಯರ್ವಹಿಸಲು ಗ್ರಾಮ ಕ್ಷೇತ್ರ ಸಹಾಯಕರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಕ್ಷೇತ್ರ ಪರಿಶೀಲನೆಗೆ ಅಧಿಕಾರಿಗಳಿಗೆ ವಾಹನಗಳಿಗೆ ಅವಕಾಶ ನೀಡಬೇಕು ಎಂದೂ ವೇತನ ಸುಧಾರಣಾ ಆಯೋಗ ಹೇಳಿತ್ತು. ಇದರ ಆಧಾರದ ಮೇಲೆ ಅಧಿಕಾರಿಗಳಿಗೆ ಸೈಕಲ್ ಮಂಜೂರು ಮಾಡಲಾಗಿದೆ.
ಹಣಕಾಸು ಇಲಾಖೆಯ ಕಾರು ಬೇಕೆಂಬ ಬೇಡಿಕೆಯ ಬಳಿಕ ಸ್ಕೂಟರ್ ಆಗಿ ನಂತರ ಎಲೆಕ್ಟ್ರಿಕ್ ವಾಹನವಾಗಿ ಮಾರ್ಪಟ್ಟಿತು. ಇದನ್ನು ಈಗ ಹಣಕಾಸು ಇಲಾಖೆ ಸೈಕಲ್ ಗೆ ಅನುಮತಿಸಿದೆ. ಇ-ಡಿಸ್ಟ್ರಿಕ್ಟ್ ಮೂಲಕ ನೀಡಲಾದ ಪ್ರಮಾಣಪತ್ರಗಳನ್ನು ಕ್ಷೇತ್ರದ ಅಧಿಕಾರಿಗಳು ಪರಿಶೀಲಿಸಬೇಕು. ಜೊತೆಗೆ ಭೂ ಅತಿಕ್ರಮಣ ಪರಿಶೀಲನೆ, ಕಟ್ಟಡಗಳ ಒಂದೇ ಬಾರಿ ತೆರಿಗೆ ಸಂಗ್ರಹದಂತಹ ವಿಷಯಗಳನ್ನು ಪರಿಶೀಲಿಸಲು ವಾಹನದ ಅಗತ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.