ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ತೆಂಕು ತಿಟ್ಟು ಯಕ್ಷಗಾನ ಹಿಮ್ಮೇಳ ತರಗತಿಯ ಉದ್ಘಾಟನೆ, 'ತೆಂಕು ತಿಟ್ಟು ಯಕ್ಷಮಾರ್ಗ-2'ಕಾರ್ಯಕ್ರಮ ಅ. 16ರಂದು ಸಂಜೆ 4ಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ.
ಹಿರಿಯ ಉದ್ಯಮಿ ಕೆ.ಕೆ ಶೆಟ್ಟಿ ಅಹಮ್ಮದಾಬಾದ್ ಸಮಾರಂಭ ಉದ್ಘಾಟಿಸುವರು. ಕಾರಿಂಜೆ ಹಳೆಮನೆ ಶಿವರಾಮ ಭಟ್ ಅಧ್ಯಕ್ಷತೆ ವಹಿಸುವರು. ಶಾಸ್ತ್ರೀಯ ಯಕ್ಷ ಶಿಕ್ಷಣ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ನೃತ್ಯ ಪ್ರಸ್ತುತಿಗೈಯುವರು.