ಅಡುಗೆ ಮನೆಯಲ್ಲಿ ಎಷ್ಟೇ ಜಾಗರೂಕತೆಯಿಂದ ಇದ್ರೂ ಸಾಲದು ಕೆಲವೊಮ್ಮೆ ಬಿಸಿ ಎಣ್ಣೆ ಅಥವಾ ಬಿಸಿ ನೀರಿನಿಂದ ಸುಟ್ಟಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಅದೇ ರೀತಿ ಬೈಕ್ ಸೈಲೆನ್ಸರ್ ತಾಗಿ ಕಾಲು ಸುಟ್ಟಿಕೊಂಡವರ ಕಥೆ ಕೇಳಲೇಬೇಡಿ.. ಇನ್ನೂ ಅದೆಷ್ಟೋ ಸಂದರ್ಭದಲ್ಲಿ ನಮ್ಮ ಜಾಗೃತಿಗೂ ಮೀರಿ ಮೈ ಚರ್ಮ ಸುಟ್ಟು ಹೋಗಬಹುದು. ಇಂತಹ ಸಂದರ್ಭದಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರೆ ತಕ್ಷಣಕ್ಕೆ ಆಸ್ಪತ್ರೆಗೆ ಓಡುವ ಬದಲು ಕೆಲವು ಮನೆಮದ್ದುಗಳಿಂದ ಆ ಸುಟ್ಟ ಉರಿ ಅಥವಾ ನೋವನ್ನು ಉಪಶಮನ ಮಾಡಿಕೊಳ್ಳಲು ಸಾಧ್ಯವಿದೆ.
ಸುಟ್ಟ ಗಾಯಕ್ಕು ಇದೆ ಮನೆ ಮದ್ದು:
ಸುಟ್ಟು ಗಾಯ ಬಹಳ ಆಳವಾಗಿದ್ರೆ ಅಥವಾ ದೇಹ ಪೂರ್ತಿ ಸುತ್ತಿರುವಂತಹ ಘಟನೆಗಳು ನಡೆದರೆ ಆಗ ಖಂಡಿತವಾಗಿಯೂ ವೈದ್ಯರನ ಸಂಪರ್ಕಿಸುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ಆದರೆ ಮನೆಯಲ್ಲಿ ನಿತ್ಯವೂ ಕೆಲಸ ಮಾಡುವಾಗ ಸಣ್ಣಪುಟ್ಟ ಗಾಯಗಳಾಗುತ್ತವೆ ಅಲ್ವಾ! ಅಂತಹ ಸಂದರ್ಭದಲ್ಲಿ ನೀವು ಕೆಲವು ಸೂಕ್ತ ಮನೆಮದ್ದುಗಳನ್ನು ಪ್ರಯತ್ನಿಸಬಹುದು ಇವು ಸುಟ್ಟ ಗಾಯವನ್ನ ತಕ್ಷಣಕ್ಕೆ ಕಡಿಮೆ ಮಾಡುತ್ತದೆ. ಇಸ್ತ್ರಿ ಪೆಟ್ಟಿಗೆ ತಗುಲಿ ಅಥವಾ ಬಿಸಿ ಕಾಫಿ ಟೀ ಚಲ್ಲಿ ಸುಟ್ಟ ಗಾಯ ಆಗಬಹುದು ಅಥವಾ ದೂರದಿಂದ ಬೆಂಕಿ ಕಿಡಿ ಹಾರಿ ಮೈ ಮೇಲೆ ಸಣ್ಣ ಪುಟ್ಟ ಗಾಯಗಳು ಆಗಬಹುದು, ಒಗ್ಗರಣೆ ಸಿಡಿದೂ ಸುಡಬಹುದು! ಇಂತಹ ಸಂದರ್ಭದಲ್ಲಿ ಚರ್ಮ ಸುಡುವುದರಿಂದ ಹೆಚ್ಚು ಉರಿ ಅಥವಾ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ತಕ್ಷಣ ಉರಿ ಕಡಿಮೆಯಾಗಲು ನೀವು ಏನು ಮಾಡಬೇಕು ಗೊತ್ತಾ?
ತಣ್ಣೀರು ಹಾಕುವುದು!
ಮೊದಲನೇದಾಗಿ ಸುಟ್ಟ ಗಾಯಕ್ಕೆ ತಣ್ಣನೆಯ ನೀರನ್ನು ಸುರಿಯಬೇಕು ಈ ರೀತಿ ಮಾಡಿದರೆ ನಿಮಗೆ ತಕ್ಷಣ ಉರಿ ಕಡಿಮೆಯಾಗುತ್ತದೆ ಕನಿಷ್ಠ 20 ನಿಮಿಷಗಳಾದರೂ ತಣ್ಣೀರಿನಲ್ಲಿ ಸುಟ್ಟ ಭಾಗವನ್ನು ಇಟ್ಟುಕೊಂಡರೆ ಆಗ ಬಹಳ ಬೇಗ ಉರಿ ಕಡಿಮೆಯಾಗುತ್ತದೆ ಜೊತೆಗೆ ಬೊಬ್ಬೆ ಬಾರದಂತೆ ತಡೆಯುತ್ತದೆ.
ಲೋಳೆ ರಸ!
ಅಲೋವೆರಾ ಮನೆಯಲ್ಲಿ ಇದ್ರೆ ಅದರಿಂದ ಆಗುವ ಪ್ರಯೋಜನ ಅಷ್ಟಿಷ್ಟಲ್ಲ ಅದರ ತಿರುಳನ್ನು ಸುಟ್ಟ ಗಾಯಕ್ಕೆ ಹಚ್ಚಬೇಕು ಆಗ ಇದು ತಕ್ಷಣಕ್ಕೆ ಗಾಯದಿಂದ ಆಗಿರುವ ಉರಿಯನ್ನು ಉಪಶಮನಗೊಳಿಸುತ್ತದೆ ಅಲೋವೆರಾ ಜೆಲ್ ಗಳಿಗಿಂತ ಒರಿಜಿನಲ್ ಅಲೋವೆರಾ ದಿಂದ ತೆಗೆದ ಲೋಳೆ ರಸ ಬಹಳ ಒಳ್ಳೆಯದು.
ಜೇನುತುಪ್ಪ!
ಸುಟ್ಟ ಗಾಯಕ್ಕೆ ತಕ್ಷಣ ಉಪಶಮನ ಬೇಕು ಅಂದ್ರೆ ಆ ಜಾಗದಲ್ಲಿ ಜೇನುತುಪ್ಪ ಹಚ್ಚುವುದು ಕೂಡ ಒಳ್ಳೆಯದು ಇದು ಶಿಲೀಂದ್ರ ನಿವಾರಕ ಗುಣ ಹೊಂದಿರುವುದರಿಂದ ಯಾವುದೇ ಬ್ಯಾಕ್ಟೀರಿಯಾ ಗಳು ಕೂಡ ಸುಟ್ಟ ಗಾಯದಲ್ಲಿ ಹುಟ್ಟಿಕೊಳ್ಳದಂತೆ ತಡೆಯುತ್ತದೆ ಜೊತೆಗೆ ಗಾಯವಾಗಿ ಆ ಚರ್ಮ ಮಾಸಿ ಹೊಸ ಚರ್ಮ ಬರಲು ಸಹಾಯ ಮಾಡುತ್ತದೆ.
ಟೂತ್ ಪೇಸ್ಟ್ ಹಚ್ಚುವುದು!
ಇನ್ನು ಸುಟ್ಟ ಗಾಯವಾದಾಗ ತಕ್ಷಣಕ್ಕೆ ಬೇರೇನು ಸಿಗದೇ ಇದ್ದರೆ, ಮನೆಯಲ್ಲಿ ಟೂತ್ ಪೇಸ್ಟ್ ಇರುತ್ತದೆ ಅಲ್ಲವೇ, ಬಿಳಿಯ ಬಣ್ಣದ ಟೂತ್ ಪೇಸ್ಟ್ ಅನ್ನು ಸುಟ್ಟ ಗಾಯದ ಸುತ್ತ ಹಚ್ಚಬೇಕು ಇದರಿಂದಲೂ ಬೊಬ್ಬೆ ಬಾರದಂತೆ ತಡೆಯುತ್ತದೆ.
ಅರಿಶಿಣ ಲೇಪನ!
ಆಂಟಿ ಬಯೋಟೆಕ್ ಗುಣ ಹೊಂದಿರುವ ಅರಿಶಿನ ಲೇಪನ ಮಾಡುವುದು ಬಹಳ ಒಳ್ಳೆಯದು ಸ್ವಲ್ಪ ಮಟ್ಟಿಗೆ ಉಪಶಮನವಾಗುತ್ತದೆ.
ಇದನ್ನು ಹೊರತುಪಡಿಸಿ ಇನ್ನೂ ಕೆಲವು ಪ್ರಮುಖವಾಗಿರುವ ಮನೆಮದ್ದುಗಳು ಅಂದ್ರೆ!
*ತುಳಸಿ ರಸವನ್ನ ತೆಗೆದು ಸುಟ್ಟ ಗಾಯದ ಮೇಲೆ ಹಚ್ಚಬೇಕು ಇದರಿಂದಲೂ ಉರಿ ಕಡಿಮೆ ಆಗುತ್ತದೆ.
*ಜೇನುತುಪ್ಪಕ್ಕೆ ತ್ರಿಫಲ ಚೂರ್ಣವನ್ನು ಬೆರೆಸಿ ಸುಟ್ಟ ಗಾಯದ ಮೇಲೆ ಹಚ್ಚಿದರೆ ಗಾಯ ಬೇಗ ಉಪಶಮನವಾಗುತ್ತದೆ.
*ಇನ್ನು ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸಿಗುವ ಸಣ್ಣ ಮೆಣಸಿನ ಗಿಡದ ಎಲೆಗಳ ರಸವನ್ನ ತೆಗೆದು ಆ ರಸವನ್ನ ಗಾಯದ ಮೇಲೆ ಹಚ್ಚಬೇಕು. ಮೆಣಸು ಎಷ್ಟು ಕಾರವಾಗಿರುತ್ತದೆಯೋ ಅದರ ಎಲೆಗಳು ಅಷ್ಟೇ ತಂಪಿನ ಗುಣವನ್ನು ಹೊಂದಿರುತ್ತದೆ ಹಾಗಾಗಿ ಈ ಮೆಣಸಿನ ಎಲೆಯ ಮನೆಮದ್ದು ಬಹಳ ಪರಿಣಾಮಕಾರಿಯಾಗಿರುತ್ತದೆ.
ಇನ್ನು ಸುಟ್ಟ ಗಾಯಕ್ಕೆ ಮನೆಯಲ್ಲಿ ಬರ್ನಲ್ ನಂತಹ ಕೆಲವು ಪ್ರಾಥಮಿಕ ಚಿಕಿತ್ಸಾ ಉಪಕರಣಗಳನ್ನು ಇಟ್ಟುಕೊಂಡಿರಿ. ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಪ್ರಥಮ ಚಿಕಿತ್ಸೆ ಉಪಕರಣ ನಿಮ್ಮ ಕೈಯಲ್ಲಿ ಇದ್ದರೆ ತಕ್ಷಣಕ್ಕೆ ಏನಾದರೂ ಒಂದು ಪರಿಹಾರ ಕಂಡುಕೊಳ್ಳಬಹುದು.
ಸುಟ್ಟ ಗಾಯಗಳಾದಾಗ ಆ ಭಾಗವನ್ನು ಸೂರ್ಯನ ಬೆಳಕಿಗೆ ತೆರೆದುಕೊಳ್ಳಬೇಡಿ. ಆಗ ಉರಿ ಇನ್ನಷ್ಟು ಜಾಸ್ತಿ ಆಗಬಹುದು. ಇನ್ನು ಸುಟ್ಟ ಗಾಯಕ್ಕೆ ಬ್ಯಾಂಡೆಡ್ ಹಾಕಬೇಡಿ. ಸುಟ್ಟ ಜಾಗವನ್ನು ಹಾಗೆಯೇ ತೆರೆದ ಗಾಳಿಗೆ ಬಿಟ್ಟರೆ ಬೇಗ ಉಪಶಮನ ಆಗುತ್ತದೆ. ಆಗ ಇನ್ನಷ್ಟು ನೋವು ಜಾಸ್ತಿ ಆಗುತ್ತದೆ ಈ ಯಾವ ಮಾರ್ಗದ ಮೂಲಕವೂ ಸುಟ್ಟ ಗಾಯ ಉಪಶಮನವಾಗಿಲ್ಲ ಅಥವಾ ನೋವು ನಿವಾರಣೆ ಆಗಿಲ್ಲ ಅಂದ್ರೆ ವೈದ್ಯರನ್ನು ಸಂಪರ್ಕಿಸಬಹುದು.