ಕಾಸರಗೋಡು: ಗಾಂಧಿ ಜಯಂತಿ ಸಪ್ತಾಹದ ಅಂಗವಾಗಿ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಛೇರಿ ವತಿಯಿಂದ ನಡೆಸಲಾದ ಮಲಯಾಳ ಮತ್ತು ಕನ್ನಡ ಪ್ರಬಂಧ ಸ್ಪರ್ಧೆ ಹಾಗೂ ಗಾಂಧಿಸೇವಾ ಕಿರುಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ತಳಂಗರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಶಾಲೆಯಲ್ಲಿ ಆಯೋಜಿಸಲಾಗಿದ್ದ ಮೇರಿ ಮಿಟ್ಟಿ-ಮೇರಾ ದೇಶ್ ಸಮಾರಂಬದಲ್ಲಿ ಬಹುಮಾನ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಬಹುಮಾನ ವಿತರಿಸಿದರು. ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ಪಿ.ಟಿ.ಎ ಅಧ್ಯಕ್ಷ ನೌಫಲ್ ತಾಯಲ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಬಿಂದು ಮತ್ತು ವಿ.ಎಚ್.ಎಸ್.ಇ ಪ್ರಭಾರ ಪ್ರಾಂಶುಪಾಲೆ ಸಜಿತಾ ಉಪಸ್ಥಿತರಿದ್ದರು. ಸ್ಕೂಲ್ ಪ್ರಿನ್ಸಿಪಾಲ್ ಎ.ವಿ.ಜಿಜಿ ಸ್ವಾಗತಿಸಿ, ನೇಷನಲ್ ಯೂತ್ ವಾಲೆಂಟಿಯರ್ ಪಿ.ಸನುಜಾ ವಂದಿಸಿದರು.