ಮುಳ್ಳೇರಿಯ : ಶಿವಳ್ಳಿ ಬ್ರಾಹ್ಮಣ ಸಭಾದ ಮುಳ್ಳೇರಿಯ ವಲಯದ ಆತಿಥ್ಯದಲ್ಲಿ ದೇಲಂಪಾಡಿ ಹಾಗೂ ಕಾರಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿ.23 ಹಾಗೂ 24ರಂದು ನಡೆಯುವ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಕಾಂಞಂಗಾಡಿನ ಶಿವಳ್ಳಿ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು. ಸಮಾವೇಶದ ಅಂಗವಾಗಿ ಸಂಘಟನೆಯ ವಿವಿಧ ವಲಯಗಳ ಸದಸ್ಯರಿಗಾಗಿ ಅ.29ರಂದು ಮುಳ್ಳೇರಿಯದ ಗಣೇಶ್ ಇನ್‍ಡೋರ್ ಕ್ರೀಡಾಂಗಣದಲ್ಲಿ ಶೆಟ್ಲ್ ಬ್ಯಾಡ್ಮಿಂಟನ್ ಸ್ಪರ್ಧೆ, ನ.5ರಂದು ಅಡೂರಿನ ವಿದ್ಯಾಭಾರತೀ ವಿದ್ಯಾಲಯದಲ್ಲಿ ಚೆಸ್ ಮತ್ತು ಕೇರಂ ಸ್ಪರ್ಧೆ, ನ.19ರಂದು ಕುಂಟಾರು ಎಯುಪಿ ಶಾಲೆಯಲ್ಲಿ ಕ್ರೀಡಾಕೂಟ ಹಾಗೂ ಚಿತ್ರ ರಚನಾ ಸ್ಪರ್ಧೆ ಮತ್ತು ನ.26ರಂದು ಕುಂಟಾರು ಎಯುಪಿ ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆಯ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಮಂಜುನಾಥ ಟಿ ಕೆ, ಜಿಲ್ಲಾ ಕಾರ್ಯದರ್ಶಿ ಡಾ. ಬಿ ಸೀತಾರಾಮ ಕಡಮಣ್ಣಾಯ, ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ. ಕೆ ರವಿಪ್ರಸಾದ್, ಕಾರ್ಯದರ್ಶಿ ಕೆ. ರಾಘವೇಂದ್ರ ಮತ್ತು ಕಾಸರಗೋಡು, ಮಂಜೇಶ್ವರ, ಏತಡ್ಕ, ಕಾಂಞಂಗಾಡು, ಮುಳ್ಳೇರಿಯ ಶಿವಳ್ಳಿ ಬ್ರಾಹ್ಮಣ ವಲಯ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.