ಎರ್ನಾಕುಳಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಒತ್ತಾಯಿಸಿ ಎನ್‍ಡಿಎ ಪ್ರಬಲ ಆಂದೋಲನ ಆರಂಭಿಸಲಿದೆÉ. ಕೊಚ್ಚಿಯಲ್ಲಿ ನಡೆದ ಎನ್‍ಡಿಎ ರಾಜ್ಯ ನಾಯಕತ್ವ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಷ್ಟಾಚಾರದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಜನತೆ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆಗೆ ಆಗ್ರಹಿಸಿ ಇದೇ 30ರಂದು ಒಂದು ಲಕ್ಷ ಜನ ಪಾಲ್ಗೊಳ್ಳುವ ಮೂಲಕ ಸೆಕ್ರೆಟರಿಯೇಟ್ ಪಾದಯಾತ್ರೆ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕೇರಳವನ್ನು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ರಾಜ್ಯ ಸರ್ಕಾರ ತಂದಿದ್ದು, ಕೇಂದ್ರದ ನೆರವಿನಿಂದ ಮಾತ್ರ ಕೇರಳದ ಖಜಾನೆಗಳು ಇಂದು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ನ.10ರಿಂದ 30ರವರೆಗೆ ರಾಜ್ಯಾದ್ಯಂತ 2000 ಸಮಾವೇಶ ಹಾಗೂ ಮೆರವಣಿಗೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ನವೆಂಬರ್ 6 ರಂದು ಚೆರ್ತಲದಲ್ಲಿ ಎನ್‍ಡಿಎ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಿದೆ.
ಕೆಲ ಪಕ್ಷಗಳೊಂದಿಗೆ ಮುಂಚೂಣಿ ವಿಸ್ತರಣೆಗೆ ಮಾತುಕತೆ ನಡೆಯುತ್ತಿದ್ದು, ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲು ಎನ್‍ಡಿಎ ನಿರ್ಧರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಹೇಳಿದರು. ಸೀಟು ಹಂಚಿಕೆ ಚರ್ಚೆ ಸೇರಿದಂತೆ ಸಭೆಯ ನಿರ್ಧಾರಗಳನ್ನು ಕೇಂದ್ರ ನಾಯಕತ್ವಕ್ಕೆ ತಿಳಿಸಲಾಗುವುದು. ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಮತ್ತು ಜಾತಿ ಗಣತಿಯಲ್ಲಿ ಬಿಡಿಜೆಎಸ್‍ನ ಭಿಪ್ರಾಯವನ್ನು ಸಭೆಯಲ್ಲಿ ಹೇಳಲಾಗಿದೆ ಎಂದು ತುಷಾರ್ ವೆಲ್ಲಪ್ಪಳ್ಳಿ ತಿಳಿಸಿರುವರು.