ಕೊಚ್ಚಿ: ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣಕ್ಕೆ ಮಹಾರಾಜರ ಹೆಸರಿರಿಸಬೇಕು ಎಂದು ಕೊಚ್ಚಿ ನಗರಸಭೆ ಆಗ್ರಹಿಸಿದೆ. ಈ ಬಗ್ಗೆ ನಗರಸಭೆ ನಿರ್ಣಯ ಅಂಗೀಕರಿಸಿದೆ.
ಆದರೆ ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವು ನಿರ್ಣಾಯಕವಾಗಿದೆ.
ಕೊಚ್ಚಿಯ ಮಹಾರಾಜರಾಗಿದ್ದ ರಾಜರ್ಷಿ ರಾಮವರ್ಮನ ಹೆಸರನ್ನು ಇರಿಸÀಬೇಕೆಂದು ನಿರ್ಣಯ ಹೇಳುತ್ತದೆ. ಶೋರ್ನೂರಿನಿಂದ ಎರ್ನಾಕುಳಂವರೆಗಿನ ರೈಲು ಮಾರ್ಗದ ಕಾಮಗಾರಿಯನ್ನು ಸಾಕಾರಗೊಳಿಸಿದವರು ರಾಜರ್ಷಿ ರಾಮವರ್ಮನ್ ಎಂದು ಸೂಚಿಸಿ ಹೆಸರು ಬದಲಾವಣೆಗೆ ಸೂಚಿಸಲಾಗಿದೆ. ನಗರಸಭೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಭಾರತೀಯ ರೈಲ್ವೆಗೆ ಹೆಸರು ಬದಲಾವಣೆಗೆ ವಿನಂತಿಸಿದೆ.