ಹೈದರಾಬಾದ್: ಮನುಷ್ಯನ ಅಗತ್ಯತೆಯಿಲ್ಲದ ಎಐ(ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಜತೆ ಕಾರ್ಯನಿರ್ವಹಿಸುವ ಚಹಾ, ಕಾಫಿ ಮತ್ತು ನೀರು ಪಡೆಯುವ ವಿಶ್ವದ ಮೊದಲ ಸ್ವಯಂಚಾಲಿತ ಮಾರಾಟ ಯಂತ್ರ ಗುರುವಾರ ನಗರದಲ್ಲಿ ಲೋಕಾರ್ಪಣೆಗೊಂಡಿದೆ.
ಹೈದರಾಬಾದ್: ಮನುಷ್ಯನ ಅಗತ್ಯತೆಯಿಲ್ಲದ ಎಐ(ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಜತೆ ಕಾರ್ಯನಿರ್ವಹಿಸುವ ಚಹಾ, ಕಾಫಿ ಮತ್ತು ನೀರು ಪಡೆಯುವ ವಿಶ್ವದ ಮೊದಲ ಸ್ವಯಂಚಾಲಿತ ಮಾರಾಟ ಯಂತ್ರ ಗುರುವಾರ ನಗರದಲ್ಲಿ ಲೋಕಾರ್ಪಣೆಗೊಂಡಿದೆ.
ಯಂತ್ರವು ಸಂಪೂರ್ಣ ಸ್ವಯಂಚಾಲಿತವಾಗಿದ್ದು, ಬಿಸ್ಕತ್ತುಗಳನ್ನು ಸಹ ವಿತರಿಸುತ್ತದೆ.
ಯಂತ್ರದ ಸಂಶೋಧಕ ಪಿ ವಿನೋದ್ ಕುಮಾರ್ ಮಾತನಾಡಿ, ಅಂತರ್ಗತ ಧ್ವನಿ ಸಹಾಯದಿಂದ ಬಳಕೆದಾರರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಜತೆಗೆ ಅವರ ಅಪೇಕ್ಷಿತ ಉತ್ಪನ್ನವನ್ನು ಆಯ್ಕೆ ಮಾಡಬೇಕು. ಈ ಯಂತ್ರದ ಬೆಲೆ 1ಲಕ್ಷ 67ಸಾವಿರ ರೂ.ಇದ್ದು, ಯಾರು ಬೇಕಾದರೂ ಖರೀದಿಸಬಹುದು ಎಂದರು.
'ಡಿಜಿಟಲ್ ಚಾಯ್' ಅಥವಾ 'ಚಾ ಎಟಿಎಂ' ಎಂದು ಕರೆಯುವ ಈ ಯಂತ್ರವನ್ನು ಹೈದರಾಬಾದ್ನ ನಾಲ್ಕೂ ದಿಕ್ಕುಗಳಲ್ಲಿ ಸ್ಥಾಪಿಸುವ ಉದ್ದೇಶವಿದೆ. ಮಾಲ್ ಮತ್ತು ಮೆಟ್ರೋಗಳಲ್ಲಿ ಸ್ವಯಂಚಾಲಿತ ಈ ವಿತರಣಾ ಯಂತ್ರಗಳನ್ನು ಸದ್ಯಕ್ಕೆ ಸ್ಥಾಪಿಸಬಹುದಾಗಿದೆ ಎಂದು ಹೇಳಿದರು.
ಬ್ಯಾಂಕ್ ಸಾಲ ಮತ್ತು ವಿಮೆ ಸೌಲಭ್ಯದೊಂದಿಗೆ ರೆಫ್ರಿಜರೇಟರ್‌ಗಿಂತ ಕಡಿಮೆ ಬೆಲೆಯಲ್ಲಿ ಈ ಯಂತ್ರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.