ಕೊಚ್ಚಿ: ಎನ್‌ಡಿಎ ಸೇರಬೇಕು ಎನ್ನುವ ಪಕ್ಷದ ತೀರ್ಮಾನವನ್ನು ಜೆಡಿಎಸ್‌ನ ಕೇರಳ ಘಟಕ ಶನಿವಾರ ತಿರಸ್ಕರಿಸಿದೆ. ರಾಜ್ಯದಲ್ಲಿ ಎಡರಂಗದೊಂದಿಗೆ ಮೈತ್ರಿ ಮುಂದುವರಿಸುವುದಾಗಿಯೂ ಸ್ಪಷ್ಟಪಡಿಸಿದೆ.
ಕೊಚ್ಚಿ: ಎನ್‌ಡಿಎ ಸೇರಬೇಕು ಎನ್ನುವ ಪಕ್ಷದ ತೀರ್ಮಾನವನ್ನು ಜೆಡಿಎಸ್‌ನ ಕೇರಳ ಘಟಕ ಶನಿವಾರ ತಿರಸ್ಕರಿಸಿದೆ. ರಾಜ್ಯದಲ್ಲಿ ಎಡರಂಗದೊಂದಿಗೆ ಮೈತ್ರಿ ಮುಂದುವರಿಸುವುದಾಗಿಯೂ ಸ್ಪಷ್ಟಪಡಿಸಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮ್ಯಾಥ್ಯೂ ಟಿ.ಥಾಮಸ್, 'ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸದೇ ಹೈಕಮಾಂಡ್ ತನ್ನ ತೀರ್ಮಾನವನ್ನು ಘೋಷಿಸಿದೆ.
ಜೆಡಿಎಸ್‌ನ ರಾಷ್ಟ್ರೀಯ ನಾಯಕತ್ವವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಘೋಷಣೆ ಮಾಡಿದ್ದರೂ, ರಾಜ್ಯದಲ್ಲಿ ಸಿಪಿಎಂ ಮಾತ್ರ ಮೈತ್ರಿಕೂಟದಲ್ಲಿ ಜೆಡಿಎಸ್ ಅನ್ನು ಮುಂದುವರಿಸಿದೆ ಎಂದು ಕಾಂಗ್ರೆಸ್ ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯ ಘಟಕ ಈ ಸ್ಪಷ್ಟನೆ ನೀಡಿದೆ.