ಕಾಸರಗೋಡು: ಕೋವಿ ಪರವಾನಿಗೆ ಉಳ್ಳವರ ಅಸೋಸಿಯೇಶನ್ ನ ಜಿಲ್ಲಾ ಸಮ್ಮೇಳನ ಹಾಗೂ ಆಡಳಿತ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ಸಮಾರಂಭ ನಾಳೆ(ಅ.8) ಬೆಳಿಗ್ಗೆ 10ಕ್ಕೆ ಕಾಸರಗೋಡು ವಿದ್ಯಾನಗರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ(ಉದಯಗಿರಿ ವಿಭಾಗೀಯ ಅರಣ್ಯ ಕಚೇರಿ ಬಳಿ) ನಡೆಯಲಿದೆ.
ಸಂಘಟನೆಯ ಜಿಲ್ಲಾಧ್ಯಕ್ಷ ನ್ಯಾಯವಾದಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಉದ್ಘಾಟಿಸುವರು. ಕಾಸರಗೋಡು ಎಡಿಎಂ. ನವೀನ್ ಬಾಬು ಕೆ, ವಲಯ ಅರಣ್ಯಾಧಿಕಾರಿ ಅಶ್ರಫ್ ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಘಟನೆ ಉಪಾಧ್ಯಕ್ಷರಾದ ಟಿ.ಪೀತಾಂಬರನ್, ಎಂ.ರಾಘವನ್, ಅರವಿಂದಾಕ್ಷನ್ ನಾಯರ್, ಜಿಲ್ಲಾ ಖಜಾಂಜಿ ಕೆ.ವಿ.ಶ್ರೀಕುಮಾರ್ ಶುಭಾಶಂಸನೆಗೈಯ್ಯುವರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನನ್ ಕುಟ್ಟಿಯಾನಂ, ಜೊತೆ ಕಾರ್ಯದರ್ಶಿ ಗಿರೀಶ್ ಎಂ.ನಾಯರ್ ಸದಾನಂದ ಶೆಟ್ಟಿ ಮೊದಲಾದವರು ನೇತೃತ್ವ ನೀಡುವರು.