ಬದಿಯಡ್ಕ: 2002ರಲ್ಲಿ ಮೊಗೇರ ಸರ್ವೀಸ್ ಸೊಸೈಟಿ ಎಂಬ ಯುವಜನರ ಸೇವಾಸಂಘಟನೆಯನ್ನು ಹುಟ್ಟು ಹಾಕಿ ಅದರ ನೇತೃತ್ವ ಸ್ಥಾನದಲ್ಲಿದ್ದು, ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿರುವ ಕೃಷ್ಣನ್ ಕೆ.ಕೆ. ಸ್ವಾಮಿಕೃಪಾ ಅವರನ್ನು ಹೈದರಾಬಾದ್‍ನ ಬಹುಜನ ಸಾಹಿತ್ಯ ಅಕಾಡೆಮಿಯು ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ 2023ನ್ನು ನೀಡಲು ಆಯ್ಕೆಮಾಡಿದೆ.
ಮೊಗೇರ ಸರ್ವೀಸ್ ಸೊಸೈಟಿಗೆ ಕೇರಳ ರಾಜ್ಯ ಸಮಿತಿ ಮತ್ತು ವಯನಾಡಿನಲ್ಲಿ ಜಿಲ್ಲಾ ಸಮಿತಿಗಳಿದ್ದು, 36 ಪ್ರಾದೇಶಿಕ ಸಮಿತಿಗಳನ್ನು ಹೊಂದಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ ಕೇಂದ್ರ ಸರ್ಕಾರದ ಆಯುಷ್ ಸರ್ಟಿಫಿಕೇಟ್ ಹೊಂದಿದ ಚಿಕ್ಕಮಂಗಳೂರಿನ ಮಿಸ್ಟರ್ ಪ್ಲಸ್ ಎಂಬ ಕಂಪೆನಿಯ ತಾಜಾ ಆಯುರ್ವೇದ ಕಷಾಯಗಳನ್ನು ಕೇರಳ ಹಾಗೂ ಕರ್ನಾಟಕದಲ್ಲಿ ಇವರ ತಂಡವು ಪ್ರಚಾರ ಗಳಿಸಿ ಮೂಲವ್ಯಾಧಿ, ಮಧುಮೇಹ, ಗರ್ಭಾಶಯ ತೊಂದರೆಗಳು, ಹೃದಯ ಸಂಬಂಧ, ಕಿಡ್ನಿ, ಮೂತ್ರಕಲ್ಲು ಖಾಯಿಲೆಗಳಿಗೆ ಔಷಧಿಯನ್ನು ನೀಡುತ್ತಿದ್ದಾರೆ. ವೈದ್ಯರು ಕೈಬಿಟ್ಟ ರೋಗಿಗಳು ಸಮೇತ ನೂರಾರು ರೋಗಿಗಳ ಖಾಯಿಲೆಗಳನ್ನು ಕಷಾಯಗಳ ಮೂಲಕವೇ ಸಂಪೂರ್ಣ ಗುಣಪಡಿಸುವಲ್ಲಿ ಇವರ ನೇತೃತ್ವದ ತಂಡವು ಯಶಸ್ವಿಯಾಗಿದೆ. ಸುದೀರ್ಘ ಕಾಲದ ಸಮಾಜಸೇವೆ ಹಾಗೂ ಕೇಂದ್ರ ಸರ್ಕಾರದ ಆಯುಷ್ ವಿಭಾಗದ ಆಯುರ್ವೇದ ಕಷಾಯ ಪ್ರಚಾರ ಹಾಗೂ ಅದರಲ್ಲಿ ಸಂಪೂರ್ಣ ಯಶಸ್ವಿ ಸೇವೆಯನ್ನು ಮನಗಂಡು ಇವರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಅಕ್ಟೋಬರ್ 15ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಅವರು ಈ ಪ್ರಶಸ್ತಿಯನ್ನು ಪಡೆಯಲಿದ್ದಾರೆ.