ಕಾಸರಗೋಡು: ರೋಗಿಯಿಂದ ಲಂಚ ಪಡೆದ ವೈದ್ಯನನ್ನು ಅಮಾನತುಗೊಳಿಸಲಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯ ಅರಿವಳಿಕೆ ವಿಭಾಗದ ಹಿರಿಯ ಸಲಹೆಗಾರ ಡಾ. ವೆಂಕಟಗಿರಿ ಅವರನ್ನು ಆರೋಗ್ಯ ಇಲಾಖೆ ಅಮಾನತು ಮಾಡಿದೆ.
ವೈದ್ಯರು 2000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಾಸರಗೋಡು ಮೂಲದ ವ್ಯಕ್ತಿ ಹರ್ನಿಯಾ ಚಿಕಿತ್ಸೆಗಾಗಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಸ್ತ್ರಚಿಕಿತ್ಸೆಗೆ ಸೂಚಿಸಿದ ವೈದ್ಯರು ಅರಿವಳಿಕೆ ತಜ್ಞ ವೆಂಕಟಗಿರಿಯನ್ನು ಭೇಟಿಯಾಗಿ ದಿನಾಂಕವನ್ನು ಪಡೆಯಲು ಹೇಳಿದ್ದರು. ನಂತರ ದೂರುದಾರರು ವೆಂಕಟಗಿರಿ ಅವರನ್ನು ಭೇಟಿ ಮಾಡಿದಾಗ ಡಿಸೆಂಬರ್‍ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದ್ದರು.
ನೋವು ಅಸಹನೀಯವಾದ ಕಾರಣ, ರೋಗಿ ಮತ್ತೆ ಮೂರು ಬಾರಿ ವೆಂಕಟಗಿರಿಯವರನ್ನು ಭೇಟಿಯಾಗಿ ಶೀಘ್ರ ಶಸ್ತ್ರಕ್ರಿಯೆ ನಿರ್ವಹಿಸುವಂತೆ ಬೇಡಿಕೆಯಿಟ್ಟಿದ್ದರು. ಆಗ ಶಸ್ತ್ರ ಚಿಕಿತ್ಸೆ ಬೇಗ ಮಾಡಲು 2000 ರೂಪಾಯಿ ನೀಡಬೇಕೆಂದು ವೈದ್ಯರು ಬೇಡಿಕೆ ಸಲ್ಲಿಸಿದ್ದರು ಎನ್ನಲಾಗಿದೆ. ನಂತರ ರೋಗಿಯು ವಿಜಿಲೆನ್ಸ್‍ಗೆ ಮಾಹಿತಿ ನೀಡಿದರು. ವಿಜಿಲೆನ್ಸ್ ಅಧಿಕೃತರು ಮಾರುವೇಶದಲ್ಲಿ ಆಗಮಿಸಿ ಬಳಿಕ ವೈದ್ಯರನ್ನು ಕೈಯಾರೆ ಸರೆಹಿಡಿದಿತ್ತು. ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೈದ್ಯರನ್ನು ರಿಮಾಂಡ್ ಮಾಡಲಾಗಿದೆ.