ಹೈದರಾಬಾದ್: 'ದಿ ಕಾಶ್ಮೀರ್ ಫೈಲ್ಸ್' ಮತ್ತು 'ದಿ ವ್ಯಾಕ್ಸಿನ್ ವಾರ್' ಮೂಲಕ ಹಿಂದಿಯಲ್ಲಿ ಖ್ಯಾತಿ ಗಳಿಸಿದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರ ಹೈದರಾಬಾದ್‌ನ ಕಚೇರಿ ಮತ್ತು ಮನೆಯಲ್ಲಿ ಐಟಿ ಅಧಿಕಾರಿಗಳು ಬುಧವಾರ ಶೋಧ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರವಿತೇಜಾ ಅಭಿನಯದ ಮುಂಬರುವ ತೆಲುಗು ಚಿತ್ರ 'ಟೈಗರ್ ನಾಗೇಶ್ವರ ರಾವ್' ಬಿಡುಗಡೆಗೆ ಸಿದ್ಧರಾಗಿದೆ. ಚಿತ್ರದ ಪ್ರಚಾರಕ್ಕಾಗಿ ಮಾಧ್ಯಮದವರನ್ನು ಭೇಟಿ ಮಾಡಲು ಸಜ್ಜಾಗುತ್ತಿದ್ದ ಸಮಯದಲ್ಲಿ ಈ ದಾಳಿ ನಡೆದಿದ್ದು, ಚಿನಿ ಉದ್ಯಮದಲ್ಲಿ ಸಂಚಲನ ಮೂಡಿಸಿದೆ.
ಅವರ ತೆಲುಗು ಚಿತ್ರ 'ಟೈಗರ್ ನಾಗೇಶ್ವರ ರಾವ್'ನಲ್ಲಿ ಮಾಸ್ ಮಹಾರಾಜ ರವಿತೇಜ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಿಸಲಾಗಿದೆ. ತೆಲುಗು, ಕನ್ನಡ, ತಮಿಳು, ಮಲೆಯಾಳಂ ಮತ್ತು ಹಿಂದಿಯಲ್ಲಿ ಈ ತಿಂಗಳ 20ರಂದು ಬಿಡುಗಡೆಯಾಗಲಿದೆ. ಹೀಗಾಗಿಯೇ ಬೃಹತ್ ಮೊತ್ತದ ಹಣವು ಕೇಂದ್ರ ಏಜೆನ್ಸಿಗಳ ಗಮನವನ್ನು ಸೆಳೆದಿರಬಹುದು ಎಂದು ಹೇಳಲಾಗುತ್ತಿದೆ.
ಇನ್ನು ಅಭಿಷೇಕ್ ಅಗರ್ವಾಲ್ ಕಳೆದ ವರ್ಷ ದ ಕಾಶ್ಮೀರ್ ಫೈಲ್ಸ್, ಕಾರ್ತೀಕೇಯ-2, ಧಮಾಕ ದಂಥ ಸಿನಿಮಾಗಳನ್ನು ನಿರ್ಮಿಸಿದ್ದರು. ಮೂಲಗಳ ಪ್ರಕಾರ, ಆದಾಯ ತೆರಿಗೆ ಮತ್ತು ಜಿಎಸ್‌ಟಿ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.