ಕೊಟ್ಟಾಯಂ: ಶಬರಿಮಲೆ ಯಾತ್ರಿಕರ ಬಸ್ ಅಪಘಾತಕ್ಕೀಡಾಗಿದೆ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಎರುಮೇಲಿ ಕನಮಲದಲ್ಲಿ ಯಾತ್ರಾರ್ಥಿಗಳ ಬಸ್ ಪಲ್ಟಿಯಾಗಿದೆ. ಆಂಧ್ರಪ್ರದೇಶದಿಂದ ಆಗಮಿಸಿದ ಭಕ್ತರ ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಶಬ್ದ ಕೇಳಿದ ಸ್ಥಳೀಯರು ಮೊದಲು ರಕ್ಷಣಾ ಕಾರ್ಯಕ್ಕೆ ಮುಂದಾದರು. ನಂತರ ಪೋಲೀಸರು ಮತ್ತು ಅಗ್ನಿಶಾಮಕ ದಳ ಆಗಮಿಸಿ ವಾಹನದಲ್ಲಿ ಸಿಲುಕಿದ್ದವರನ್ನು ಹೊರತೆಗೆದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಅಪಘಾತದಿಂದಾಗಿ ಶಬರಿಮಲೆಗೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ತೆರವುಗೊಳಿಸಲಾಯಿತು.