ಬ್ರಿಟಿಷ್ ಕೊಲಂಬಿಯಾ: ಇಬ್ಬರು ತರಬೇತಿ ನಿರತ ಭಾರತೀಯ ಪೈಲಟ್ ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಪೈಲಟ್ ಗಳನ್ನು ಮುಂಬೈನ ಅಭಯ್ ಗಡ್ರೂ ಹಾಗೂ ಯಶ್ ವಿಜಯ್ ರಾಮುಗಡೆ ಎಂದು ಗುರುತಿಸಲಾಗಿದೆ.
ಅವಳಿ ಎಂಜಿನ್ ಹೊಂದಿದ್ದ ಪೈಪರ್ ಪಿಎ-34 ಸೆನೆಕಾ ಲಘು ವಿಮಾನವು ಚಿಲ್ಲಿವಾಕ್ ನಗರದ ಮರವೊಂದಕ್ಕೆ ಢಿಕ್ಕಿ ಹೊಡೆದು, ಬೀದಿ ಬದಿ ಹೋಟೆಲ್ ಒಂದರ ಹಿಂಭಾಗ ಬೆಂಕಿ ಹೊತ್ತಿಕೊಂಡಿತು ಎಂದು ಕೆನಡಾ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ಪೈಲಟ್ ಗಳಲ್ಲದೆ ಮತ್ತೊಬ್ಬ ಪೈಲಟ್ ಕೂಡಾ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ವಿಮಾನದ ಅಪಘಾತಕ್ಕೆ ಏನು ಕಾರಣ ಎಂಬುದು ಈವರೆಗೆ ತಿಳಿದು ಬಂದಿಲ್ಲ. ಘಟನೆಯ ಕುರಿತು ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆ ಪ್ರಾರಂಭಿಸಿದೆ.