ಕಾಸರಗೋಡು: ಬಸ್ ಪ್ರಯಾಣದ ಮಧ್ಯೆ ವಿದ್ಯುತ್ ಕಂಬಕ್ಕೆ ತಲೆ ಬಡಿದು ದಾರುಣವಾಗಿ ಮೃತಪಟ್ಟ ವಿದ್ಯಾರ್ಥಿ ಮನ್ವಿತ್(16)ಅಂತ್ಯ ಸಂಸ್ಕಾರ ಗುರುವಾರ ನೆರೇರಿತು. ಶವಮಹಜರು ನಡೆಸಿದ ನಂತರ ಮೃತದೇಹವನ್ನು ವಿದ್ಯಾರ್ಥಿ ಕಲಿಯುತ್ತಿದ್ದ ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಗೆ ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕಿರಿಸಲಾಯಿತು. ಶಿಕ್ಷಕರು, ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಅಂತಿಮ ದರ್ಶನ ಪಡೆದರು. ಶಾಲೆಯ ಎನ್‍ಸಿಸಿ ಕ್ಯಾಡೆಟ್ ಆಗಿದ್ದ ಮನ್ವಿತ್, ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದನು. ಅಂತಿಮ ದರ್ಶನದ ನಂತರ ಮನೆಗೆ ಕೊಂಡೊಯ್ಯಲಾಯಿತು. ವಿದೇಶದಲ್ಲಿ ಉದ್ಯೋಗಿಯಾಗಿರುವ ಮನ್ವಿತ್ ತಂದೆ ಜಿ. ಸುನಿಲ್ ಕುಮಾರ್ ಗುರುವಾರ ವಿದೇಶದಿಂದ ಊರಿಗೆ ವಾಪಸಾಗಿದ್ದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಖಾಸಗಿ ಬಸ್‍ನಲ್ಲಿ ಸಂಚರಿಸುವ ಮಧ್ಯೆ ರಸ್ತೆ ಅಂಚಿನ ವಿದ್ಯುತ್ ಕಂಬಕ್ಕೆ ತಲೆ ಬಡಿದು ಮನ್ವಿತ್ ದಾರುಣವಾಗಿ ಮೃತಪಟ್ಟಿದ್ದನು.