ಕಾಸರಗೋಡು: ಜಿಲ್ಲೆಯ 2023-24ನೇ ಸಾಲಿನ ಮೊದಲ ತ್ರೈಮಾಸಿಕ ಪರಿಶೀಲನೆ (ಜೂನ್) ಇತ್ತೀಚೆಗೆ ಕಾಸರಗೋಡು ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಇನ್ಬಾಶೇಖರ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಸಮಗ್ರ ವಲಯಗಳ ಯೋಜನಾನುಷ್ಠಾನ, ಮೀಸಲು ನಿಧಿ ಸಹಿತ ಆರ್ಥಿಕ ವಲಯದ ಸಮಗ್ರ ಅವಲೋಕನ ನಡೆಯಿತು. ಪ್ರಾಥಮಿಕ ವಲಯದಲ್ಲಿ 1414.42 ಕೋಟಿ ರೂ., ಮಾಧ್ಯಮಿಕ ವಲಯದಲ್ಲಿ 479.33 ಕೋಟಿ ರೂ. ಮತ್ತು ತೃತೀಯ ವಲಯದಲ್ಲಿ 69.99 ಕೋಟಿ ರೂ. ಸಹಿತ ಒಟ್ಟು 2577. 66 ಕೋಟಿಗಳನ್ನು ಒಟ್ಟು ಸಾಲವಾಗಿ ವಿತರಿಸಲಾಗಿದೆ. ಜಿಲ್ಲೆಯ ಸಾಲ ಹೂಡಿಕೆ ಪ್ರಮಾಣ ಶೇ.84.53ರಷ್ಟಿದೆ. ಘರ್ ಘರ್ ಕೆಸಿಸಿ ಅಭಿಯಾನ ಯೋಜನೆಯ ಯಶಸ್ಸಿಗೆ ಎಲ್ಲ ಬ್ಯಾಂಕ್ ಗಳು ಹೆಚ್ಚಿನ ಗಮನ ಹರಿಸಿ ನಿಗದಿತ ಗುರಿ ಸಾಧಿಸುವಂತೆ ಸಭೆ ವಿನಂತಿಸಿತು.
.ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧಕ ಬಿಮಲ್ ಎನ್.ವಿ., ನಬಾರ್ಡ್ ಡಿಡಿಎಂ. ದಿವ್ಯಾ ಕೆ.ಬಿ, ಆರ್‍ಬಿಐ ಪ್ರತಿನಿಧಿ ಶ್ಯಾಮ್ ಸುಂದರ್ ಮತ್ತು ಹರೀಶ್ ಪುದುಕೊಳಿ ಮಾತನಾಡಿದರು. ಸ್ಪೆಷಲ್ ಬ್ರಾಂಚ್ ಎಸ್. ಐ ರವೀಂದರ್ ಜಿಲ್ಲೆಯ ಬ್ಯಾಂಕ್ ಗಳ ಭದ್ರತೆಯ ಕುರಿತು ವಿವರಿಸಿದರು.