ನವದೆಹಲಿ: ಕಬ್ಬು ಮತ್ತು ಭತ್ತದ ಹೊಟ್ಟು ಸುಡುವುದರಿಂದ ವಿಷಕಾರಿ ವಸ್ತು ಬಿಡುಗಡೆಯಾಗುವ ಸಾಧ್ಯತೆ ಇದ್ದು, ಕೃಷಿ ಕಾರ್ವಿುಕರಲ್ಲಿ ನಿಗೂಢ ಮೂತ್ರಪಿಂಡ ಕಾಯಿಲೆಗೆ ಇದು ಕಾರಣವಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ನವದೆಹಲಿ: ಕಬ್ಬು ಮತ್ತು ಭತ್ತದ ಹೊಟ್ಟು ಸುಡುವುದರಿಂದ ವಿಷಕಾರಿ ವಸ್ತು ಬಿಡುಗಡೆಯಾಗುವ ಸಾಧ್ಯತೆ ಇದ್ದು, ಕೃಷಿ ಕಾರ್ವಿುಕರಲ್ಲಿ ನಿಗೂಢ ಮೂತ್ರಪಿಂಡ ಕಾಯಿಲೆಗೆ ಇದು ಕಾರಣವಾಗುತ್ತಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಭಾರತ, ಶ್ರೀಲಂಕಾ, ಅಮೆರಿಕ ಸಹಿತ ಹಲವು ದೇಶಗಳಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಕುಡಿಯುವ ನೀರು, ಉಸಿರಾಟ ಅಥವಾ ಆಹಾರ ಮೂಲಕ ಇದು ಕಾರ್ವಿುಕರ ದೇಹಕ್ಕೆ ಸೇರ್ಪಡೆ ಆಗುತ್ತದೆ ಎಂದು ಕೊಲೊರಾಡೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೇರೆಡ್ ಬ್ರೌನ್ ಹೇಳಿದ್ದಾರೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಭತ್ತ ಮತ್ತು ಕಬ್ಬಿನ ತ್ಯಾಜ್ಯಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಇದರಿಂದ ದೆಹಲಿಯಲ್ಲಿ ವಾಯುಮಾಲಿನ್ಯ ಏರಿಕೆಯಾಗುವ ಸಂಗತಿ ಸಾಮಾನ್ಯವಾಗಿದೆ. ಈ ಬೆನ್ನಲ್ಲೇ, ತಜ್ಞರ ವರದಿ ಆತಂಕ ಉಂಟು ಮಾಡಿದೆ.