ಕಾಸರಗೋಡು: ಜಿಲ್ಲಾ ಪುಷ್ಪ ಎಂದು ಘೋಷಿಸಲಾಗಿರುವ ಕ್ರಿನಮ್ ಮಲಬಾರಿಕಂ/ ಅಥವಾ ಮಲಬಾರ್ ನೀರು ನೈದಿಲೆ ಯ ಸ್ಥಿತಿ ವಿಶ್ಲೇಷಣೆ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದೆ. ಜಿಲ್ಲಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಉಪಕ್ರಮದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮತ್ತು ಜೀವವೈವಿಧ್ಯ ಕ್ಲಬ್ ಸಮೀಕ್ಷೆಗೆ ಮುಂದಾಗಿದೆ. ಸಿಹಿನೀರಿನ ಜೀವವೈವಿಧ್ಯ ಸಂರಕ್ಷಣಾ ಸಂಸ್ಥೆ(ಐಯುಸಿಎನ್) ಮತ್ತು ಝೂ ಔಟ್ರೀಚ್ ಸಂಸ್ಥೆಯ ಸಹಯೋಗದೊಂದಿಗೆ ಪೆರಿಯದಲ್ಲಿ ಅಧ್ಯಯನವನ್ನು ನಡೆಸಲಾಗುತ್ತಿದೆ.
ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದನ್ ಉದ್ಘಾಟಿಸಿದರು. ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಡಾ.ಪಿ.ಬಿಜು, ವಿ.ಎಂ.ಅಖಿಲಾ, ಸುಶ್ಮಿತಾ ಚಂದ್ರನ್ ಮತ್ತು ಶ್ಯಾಮ್ ಪುರವಂಕರ ಮಾತನಾಡಿದರು. ಪ್ರಾಧ್ಯಾಪಕ ಡಾ.ಜೋಸ್ ಕುಟ್ಟಿ ಸ್ವಾಗತಿಸಿದರು. ಝೂ ಔಟ್ರೀಚ್ ಸಂಸ್ಥೆಯ ಸಂಶೋಧಕಿ ಉμÁ ಅಧ್ಯಯನ ವಿಧಾನವನ್ನು ವಿವರಿಸಿದರು. ನಂತರ ತಲಾ 10 ಮಂದಿಯ ಮೂರು ತಂಡಗಳು ಮೂರು ಕಿಲೋಮೀಟರ್‍ಗಳಷ್ಟು ವಿಸ್ತಾರವಾಗಿರುವ ಸಸ್ಯದ ವಿವರಗಳನ್ನು ಸಮೀಕ್ಷೆ ನಡೆಸಿತು.