HEALTH TIPS

ಪತ್ನಿ, ಪುತ್ರಿಯರನ್ನು ಗುಂಡಿಕ್ಕಿ ಕೊಂದು, ಆತ್ಮಹತ್ಯೆಗೆ ಶರಣಾದ ಆಂಧ್ರ ಪೊಲೀಸ್!

Top Post Ad

Click to join Samarasasudhi Official Whatsapp Group

Qries

 

               ಕಡಪಾ: ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಗುಂಡಿಕ್ಕಿ ಕೊಂದ 55 ವರ್ಷದ ಆಂಧ್ರ ಪ್ರದೇಶದ ಪೊಲೀಸ್  ಹೆಡ್ ಕಾನ್ ಸ್ಟೆಬಲ್ ಒಬ್ಬರು ಬಳಿಕ ತಾನೂ ಕೂಡಾ ಗುಂಡು ಹಾರಿಸಿಕೊಂಡು ಸಾವನ್ನಪಿದ್ದಾರೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

              ವೈಯಕ್ತಿಕ ಕಾರಣಗಳಿಂದಾಗಿ ನಡೆದಿರುವ ಘಟನೆಯು ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 1993 ರ ಬ್ಯಾಚ್ ನ ಪೊಲೀಸ್‌ ಮನೆಯಿಂದ ಸೂಸೈಡ್ ನೋಟ್ ವಶಕ್ಕೆ ಪಡೆಯಲಾಗಿದೆ.

              ಕಡಪಾ  ಪಟ್ಟಣ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ವರಲು, ನಿನ್ನೆ (ಬುಧವಾರ) ರಾತ್ರಿ 11 ಗಂಟೆಯವರೆಗೂ ಕೆಲಸ ಮಾಡಿ ಠಾಣೆಯಿಂದ ಪಿಸ್ತೂಲ್ ಮತ್ತು ಕೆಲವು ಗುಂಡಿನ ಸುತ್ತುಗಳನ್ನು ತೆಗೆದುಕೊಂಡು ಮನೆಗೆ ಹೋಗಿದ್ದಎಂದು ಕಡಪ ಉಪ- ವಿಭಾಗೀಯ ಪೊಲೀಸ್ ಅಧಿಕಾರಿ ಎಂ.ಡಿ.ಶರೀಫ್  ಸುದ್ದಿಸಂಸ್ಥೆ ಪಿಟಐಗೆ ತಿಳಿಸಿದ್ದಾರೆ. 

                     ವೆಂಕಟೇಶ್ವರಲು ಅವರ ಹಿರಿಯ ಮಗಳು, ಸುಮಾರು 20 ವರ್ಷ ವಯಸ್ಸಿನವಳಾಗಿದ್ದು, ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಕಿರಿಯವಳು 10 ನೇ ತರಗತಿಯಲ್ಲಿ ಓದುತ್ತಿದ್ದಳು, ಕಾನ್ ಸ್ಟೇಬಲ್ ಅವರ ಹೆಂಡತಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು ಎಂದು ಅವರು ವಿವರಿಸಿದರು. 

                    ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಹಣವನ್ನು ಕಳೆದುಕೊಂಡಿದ್ದ  ಹೆಡ್ ಕಾನ್‌ಸ್ಟೆಬಲ್ ಕೆಲವು ಕೌಟುಂಬಿಕ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಮೂಲಗಳು ತಿಳಿಸಿವೆ.  ವೆಂಕಟೇಶ್ವರಲು ಮನೆಗೆ ಕಡಪಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಕೌಶಲ್ ಭೇಟಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


    Below Post Ad

    src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.
    Qries