ಸಮರಸ ಚಿತ್ರಸುದ್ದಿ: ಬದಿಯಡ್ಕ: ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ಸೂಚಕವಾಗಿ ರಾಷ್ಟ್ರ ರಾಜಧಾನಿಯಲ್ಲಿ ಅಮೃತ ಉದ್ಯಾನವನ್ನು ರಚಿಸುವ ಗುರಿಯನ್ನು ಹೊಂದಿರುವ ಅಭಿಯಾನದ ಅಂಗವಾಗಿ ಲೀಡ್ ಬ್ಯಾಂಕ್ ನೇತೃತ್ವದಲ್ಲಿ ಅಮೃತ ಕಲಶ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ನೀರ್ಚಾಲು ಸಮೀಪದ ಮಾನ್ಯ ಹಾಗೂ ಕಡಂಬಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸದಸ್ಯೆಯರು ಮಣ್ಣು ಸಮರ್ಪಣೆ ಮಾಡಿದರು. ಉದ್ಯೋಗ ಖಾತ್ರಿ ಯೋಜನೆಯ ಗುಂಪು ಮುಖಂಡರಾದ ವಸಂತಿ ಮಾನ್ಯ ಹಾಗೂ ಅನಸೂಯಾ ಅವರು ಮಣ್ಣು ಸಮರ್ಪಿಸಿದರು. ಲೀಡ್ ಬ್ಯಾಂಕ್ ಕಾಸರಗೋಡು ಅಧಿಕಾರಿ ಹರೀಶ್ ಪುದುಕೋಳಿ ನೇತೃತ್ವ ವಹಿಸಿದ್ದರು.