ಮಧೂರು: ನ.19ರಂದು ಪಳ್ಳತ್ತಡ್ಕದಲ್ಲಿ ನಡೆಯಲಿರುವ ಪುರುಷೋತ್ತಮ ಯಾಗದ ಸಮಿತಿಯ ನೇತೃತ್ವದಲ್ಲಿ ಕುಂಬಳೆ ಸೀಮೆಯ ಪ್ರಧಾನ ದೇವಸ್ಥಾನಗಳಲ್ಲೊಂದಾದ ಮಧೂರು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.
ರಾಮನಾಮ ಜಪ, ಧನ್ವಂತರಿ ಪೂಜೆ, ಪುರುಷೋತ್ತಮ ಯಾಗದಿಂದ ಸೀಮೆಯ ಎಲ್ಲರೂ ಪ್ರಭು ಶ್ರೀರಾಮಚಂದ್ರನಂತೆ ಪುರುಷೋತ್ತಮ ಗುಣವನ್ನು ಸಂಪಾದಿಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ದೇವರಲ್ಲಿ ಬೇಡಿಕೊಳ್ಳಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಯಾಗಸಮಿತಿಯ ಮಾರ್ಗದರ್ಶಕ ಜಯದೇವ ಖಂಡಿಗೆ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಕಾರ್ಯದರ್ಶಿ ರಾಜನ್ ಮುಳಿಯಾರು, ಸುರೇಶ್ ಬಾಬು ಕಾನತ್ತೂರು, ಕೋಶಾಧಿಕಾರಿ ಮಂಜುನಾಥ ಮಾನ್ಯ, ಸಮಿತಿಯ ಸದಸ್ಯರು ಈ ಸಂದಭರ್Àದಲ್ಲಿ ಹಾಜರಿದ್ದರು.