ಕಾಸರಗೋಡು: ಜಿಲ್ಲೆಯಲ್ಲಿ ಕ್ಷಯರೋಗದಿಂದ ಬಳಲುತ್ತಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ'ಕೈತಾಂಗ್' ಎಂಬ ಯೋಜನೆ ಜಾರಿಗೊಳಿಸಿದೆ. ಕ್ಷಯ ರೋಗಿಗಳಿಗೆ ಸಾಮಾನ್ಯವಾಗಿ ನೀಡುವ ಔಷಧಗಳಿಗೆ ಸ್ಪಂದಿಸದೆ, ಕಾಯಿಲೆ ಉಲ್ಬಣಾವಸ್ಥೆಯಲ್ಲಿರುವ ರೋಗಿಗಳಿಗೆ ಯೋಜನೆ ನೆರವಾಗಲಿದೆ. ಯೋಜನೆಗಾಗಿ ಒಂಬತ್ತು ಲಕ್ಷ ರೂಪಾಯಿ ಮೀಸಲಿರಿಸಿರುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಮಾಹಿತಿ ನೀಡಿದ್ದಾರೆ.
ಜಿಲ್ಲಾ ವೈದ್ಯಾಧಿಕಾರಿಗಳ ಮೂಲಕ ಯೋಜನೆ ಅನುಷ್ಠಾನಗೊಳಿಸಲಾಗುವುದು. ಯೋಜನೆಯನ್ವಯ ಜಿಲ್ಲಾ ಟಿಬಿ ಕೇಂದ್ರದ ಮೂಲಕ ಜಿಲ್ಲೆಯ ವಿವಿಧೆಡೆ ಸಂತ್ರಸ್ತರ ಮನೆಗಳಿಗೆ ಪೌಷ್ಟಿಕಾಂಶದ ಕಿಟ್‍ಗಳನ್ನು ತಲುಪಿಸಲಾಗುವುದು. ದ್ವಿದಳ ಧಾನ್ಯಗಳು ಪೆÇ್ರೀಟೀನ್, ಕಬ್ಬಿಣಾಂಶದಿಂದ ಕೂಡಿದ ಜೀವಸತ್ವಗಳು ಮತ್ತು ಸೂಕ್ಷ್ಮ ಪೆÇೀಷಕಾಂಶಗಳು ಸೇರಿದಂತೆ ವಿವಿಧ ಪೌಷ್ಟಿಕಾಂಶದ ಆಹಾರಗಳು ಕಿಟ್‍ಗಳಲ್ಲಿ ಒಳಪಡಿಸಲಾಗಿದೆ. ಕ್ಷಯರೋಗ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರಲು ಔಷಧದ ಹೊರತಾಗಿ ಪೆÇೀಷಕಾಂಶಗಳು ಅತ್ಯಗತ್ಯ ಎಂಬುದನ್ನು ಮನಗಂಡು ಇಂತಹ ಯೋಜನೆ ಸಿದ್ಧಪಡಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಟಿಬಿ ಅಧಿಕಾರಿ ಡಾ.ಎ.ಮುರಳೀಧರ ನಲ್ಲೂರಾಯ ಅವರು ಸಂತ್ರಸ್ತ ರೋಗಿಗಳಿಗೆ ವಿತರಿಸುವ ಕಿಟ್‍ಗಳನ್ನು ಸ್ವೀಕರಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್, ಉಪ ಸಮೂಹ ಮಾಧ್ಯಮ ಅಧಿಕಾರಿ ಎನ್.ಪಿ.ಪ್ರಶಾಂತ್ ಉಪಸ್ಥಿತರಿದ್ದರು. ಡಿಆರ್‍ಟಿಬಿ ಸಂಯೋಜಕ ಟಿ.ಆರ್.ಅಭಿಜಿತ್, ಸಾಂಖ್ಯಿಕ ಸಹಾಯಕ ಎಸ್.ರಜಿನಿಕಾಂತ್, ಜಿಪಂ ಮೇಲ್ವಿಚಾರಕಿ ಪಿ.ಪ್ರವೀಣಾ, ಹಿರಿಯ ಚಿಕಿತ್ಸಾ ಮೇಲ್ವಿಚಾರಕಿ ಜಿ.ಆಶಿತಾ, ಟಿಬಿ ಆರೋಗ್ಯ ಸಂದರ್ಶಕ ಎಸ್.ಕೆ.ನಿಧೀಶ್ ಲಾಲ್ ಪಾಲ್ಗೊಂಡಿದ್ದರು.